Advertisement

ಬೆಂಗಳೂರಿಗೆ ಪಿಬಿಎಲ್‌ ಕಿರೀಟ

12:30 AM Jan 14, 2019 | Team Udayavani |

ಬೆಂಗಳೂರು: ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಫೈನಲ್‌ನಲ್ಲಿ ಆತಿಥೇಯ ಬೆಂಗಳೂರು ರಾಪ್ಟರ್  4-3 ಅಂತರದಿಂದ ಮುಂಬೈ ರಾಕೆಟ್ಸ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಏರಿದ್ದ ಮುಂಬೈ ರಾಕೆಟ್ಸ್‌ ನಿರಾಶೆ ಅನುಭವಿಸಿದೆ. 

Advertisement

ಕಳೆದ ಸಲ ಫೈನಲ್‌ಗೆ ತಲುಪಿದ್ದ ಬೆಂಗಳೂರು ಸ್ವಲ್ಪದರಲ್ಲೇ ಟ್ರೋಫಿ ಕಳೆದುಕೊಂಡಿತ್ತು.  ಪಂದ್ಯದ ಆರಂಭದಿಂದಲೂ ಎರಡೂ ತಂಡಗಳ ನಡುವೆ ಸಮಬಲದ ಸೆಣಸಾಟ ನಡೆದಿತ್ತು. ಆದರೆ ನಂತರದ ಹಂತದಲ್ಲಿ ಉಭಯ ತಂಡಗಳು ಕ್ರಮವಾಗಿ 3-3 ಅಂಕಗಳಿಂದ ಸಮಸಾಧಿಸಿದ್ದವು. ಅಂತಿಮವಾಗಿ ಪುರುಷರ ಡಬಲ್ಸ್‌ ಪಂದ್ಯದಲ್ಲಿ 2-0 (15-13, 15-10) ಅಂತರದಿಂದ ಗೆದ್ದ ಬೆಂಗಳೂರು ತಂಡ ಚಾಂಪಿಯನ್‌ ಆಯಿತು. ಬೆಂಗಳೂರು ತಂಡವನ್ನು ಮೊಹಮ್ಮದ್‌ ಅಹ್ಸಾನ್‌-ಹೆಂಡ್ರಾ ಸೆಟಿಯಾವಾನ್‌ ಗೆಲ್ಲಿಸಿದರು. ಮುಂಬೈ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಕೊಂಡೊಯ್ಯಲಾಗದೆ ಕಿಮ್‌ ಜಿ ಜುಂಗ್‌-ಲೀ ಯಾಂಗ್‌ ಭಾರೀ ನಿರಾಶೆ ಅನುಭವಿಸಿದರು.

ಸಮಬಲದ ಸೆಣಸು: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಆರಂಭದಲ್ಲಿ ಮುಂಬೈ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಬೆಂಗಳೂರು ಬಿರುಸಿನ ಆಟ ಪ್ರದರ್ಶಿಸಿತು. ಭರ್ಜರಿ ಕಮ್‌ಬ್ಯಾಕ್‌ ನಡೆಸಿತು. 3-3 ಅಂಕಗಳ ಸಮಬಲದ ಆಟ ಪ್ರದರ್ಶಿಸಿತು. 

ಬೆಂಗಳೂರು ತಂಡದ ಎಲ್‌ ಸ್ಮಿತ್‌- ಎಲಿಸ್‌ ಜೋಡಿ ಮಿಶ್ರ ಡಬಲ್ಸ್‌ನಲ್ಲಿ 0-2 ಅಂತರದಿಂದ ಮುಂಬೈನ ಜುಂಗ್‌-ಬೆರ್ನಾಡೆತ್‌ ವಿರುದ್ಧ ಸೋಲು ಅನುಭವಿಸಿದರು. ಹೀಗಾಗಿ ಆತಿಥೇಯರು ಹಿನ್ನಡೆ ಅನುಭವಿಸಬೇಕಾಗಿ ಬಂತು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 2-0 ಅಂತರದಿಂದ ಮುಂಬೈನ ಅಂತಾನ್ಸನ್‌ ಅವರನ್ನು ಸೋಲಿಸಿ ಬೆಂಗಳೂರು ಸಮ ಸಾಧಿಸುವಂತೆ ಮಾಡಿದರು. ಹಲವು ಸವಾಲುಗಳ ನಡುವೆಯೂ ಶ್ರೀಕಾಂತ್‌ ಮಿಂಚಿನ ಹೊಡೆತಗಳ ಮೂಲಕ ಗಮನ ಸೆಳೆದರು. ಮಹಿಳಾ ಸಿಂಗಲ್ಸ್‌ನಲ್ಲಿ ರಾಪ್ಟರ್ನ ಟಿಟಿ ವಿಯು ಕೂಡ 2-0 ಅಂತರದಿಂದ ಪರದೇಶಿ ಅವರನ್ನು ಸೋಲಿಸಿದರು. ಇದರಿಂದ ಬೆಂಗಳೂರು ತಂಡ ಮುನ್ನಡೆ ಸಾಧಿಸುವಂತೆ ಮಾಡಿದರು. ಮತ್ತೂಂದು ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಸಾಯಿ ಪ್ರಣೀತ್‌ 1-2 ಅಂತರದಿಂದ ಸಮೀರ್‌ ವರ್ಮ ವಿರುದ್ಧ ಸೋತರು. ಹೀಗಾಗಿ ಎರಡೂ ತಂಡಗಳು 3-3 ರಿಂದ ಸಮಸಾಧಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next