Advertisement

ಪೇಟಿಎಂ ನೀಡುತ್ತಿದೆ ಪಕ್ಕಾ “ಕ್ಯಾಶ್ ಬ್ಯಾಕ್” ಆಫರ್ ..!

04:25 PM Jul 07, 2021 | |

ನವ ದೆಹಲಿ : ಡಿಜಿಟಲ್ ಪೇಮೆಂಟ್ ಆ್ಯಪ್ ಗಳ ದೈತ್ಯ ಪೇಟಿಎಂ ಇತ್ತೀಚೆಗೆ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

Advertisement

ಹೌದು, ಪೇಟಿಎಂ ತನ್ನ ಆರು ವರ್ಷಗಳ ಡಿಜಿಟಲ್ ಇಂಡಿಯಾ ಮಿಷನ್ ಸಂಭ್ರಮವನ್ನು ಆಚರಿಸಲು ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಪ್ರಾರಂಭಿಸಿದೆ.

ವ್ಯಾಪಾರಿಗಳು ಮತ್ತು ಗ್ರಾಹಕರು ಮಾಡುವ ವಹಿವಾಟಿನ ಕ್ಯಾಶ್‍ ಬ್ಯಾಕ್ ತನ್ನ ಆ್ಯಪ್ ಮೂಲಕ 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಕಂಪನಿಯೇ ಕಳೆದ ಶುಕ್ರವಾರ ತಿಳಿಸಿದೆ.

ಇದನ್ನೂ ಓದಿ : ಸಂಪುಟ ಸರ್ಜರಿ : ಸಂಜೆ 6ಕ್ಕೆ ನಡೆಯುವ ಪ್ರಮಾಣ ವಚನದಲ್ಲಿ 43 ಮಂದಿ ಮೋದಿ ಟೀಮ್ ಗೆ ಎಂಟ್ರಿ..?

ಪೇಟಿಎಂ ಆ್ಯಪ್ ಮೂಲಕ ಮಾಡುವ ಪ್ರತಿಯೊಂದು ವರ್ಗಾವಣೆಗೂ ಗ್ರಾಹಕರು ಕ್ಯಾಶ್‍ ಬ್ಯಾಕ್ ಸೌಲಭ್ಯ ಪಡೆಯಬಹುದು ಎಂದು ಹೇಳಿದೆ. ಅಲ್ಲದೇ ಯಾವುದೇ ಅಂಗಡಿಗಳಲ್ಲಿ ಪೇಟಿಎಂ ಕ್ಯೂ ಆರ್ ಕೋಡ್ ಬಳಸುವ ಗ್ರಾಹಕರಿಗೂ ಕ್ಯಾಶ್ ಬ್ಯಾಕ್ ಸೌಲಭ್ಯ ನೀಡಲಿದೆ.

Advertisement

ಕಳೆದ ವರ್ಷ, ಕಂಪನಿಯು ‘ಆಲ್-ಇನ್-ಒನ್ ಕ್ಯೂ ಆರ್’ ಕೋಡ್ ಅನ್ನು ಪ್ರಾರಂಭಿಸಿತು, ಇದು ಯುಪಿಐ ಆಧಾರಿತ ಎಲ್ಲಾ ಅಪ್ಲಿಕೇಶನ್‍ ಗಳಿಂದ ಹಣದ ವರ್ಗಾವಣೆಯನ್ನು ಮಾಡಲು ಹಾಗೂ ಸ್ವೀಕಾರ ಮಾಡಲು  ಅನುವು ಮಾಡಿಕೊಟ್ಟಿತು

ಇನ್ನು,  ಡಿಜಿಟಲ್ ಪಾವತಿ ಅಪ್ಲಿಕೇಶನ್ ಬಳಸುವ ವ್ಯಾಪಾರಿಗಳಿಗಾಗಿ ಪೇಟಿಎಂ ವಿಶೇಷ ಆಫರ್ ಅನ್ನು ನೀಡುತ್ತಿದೆ. ಪೇಟಿಯಂ ಅಪ್ಲಿಕೇಶನ್ ಮೂಲಕ ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ಹೊಂದಿರುವ ವ್ಯಾಪಾರಿಗಳು ಪೇಟಿಯಂನಿಂದ ಪ್ರಮಾಣಪತ್ರಗಳು ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು – ಸೌಂಡ್‍ ಬಾಕ್ಸ್ ಮತ್ತು ಐಒಟಿ ಸಾಧನಗಳನ್ನು ಪಡೆಯಬಹುದು. ಇನ್ನು ಐಪಿಒ ಬೌಂಡ್ ಕಂಪೆನಿಯು ಡಿಜಿಟಲ್ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆಯೂ ತರಬೇತಿ ನೀಡಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೇಟಿಯಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಥಾಪಕ ವಿಜಯ್ ಶೇಖರ್ ಶರ್ಮಾ, ಭಾರತವು ತನ್ನ ಡಿಜಿಟಲ್ ಇಂಡಿಯಾ ಮಿಷನ್‍ ಬಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ ಗಮನಾರ್ಹ ಸಾಧನೆ ಮಾಡಿದೆ. ಆರ್ಥಿಕತೆಗೆ  ಬಹಳ ದೊಡ್ಡ ಕೊಡುಗೆ ನೀಡುತ್ತದೆ. ಪೇಟಿಎಂ ಪ್ರಸ್ತಾಪಿಸಿದ ಕ್ಯಾಶ್‍ ಬ್ಯಾಕ್ ಯೋಜನೆಯು ಡಿಜಿಟಲ್ ಇಂಡಿಯಾವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಡಿಜಿಟಲ್ ಇಂಡಿಯಾ ಮಿಷನ್‍ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಸಿಂಗ್,  ಕಳೆದ ಆರು ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಮಿಷನ್ ಭಾರತವನ್ನು ಜಾಗತಿಕ ನಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿರಿಸಿದೆ. ಈ ಮಿಷನ್ ಮೇಲೆ ನಂಬಿಕೆ ಇಟ್ಟಿರುವ ಪೇಟಿಎಂ ಹಾಗೂ ವಿಜಯ್ ಶೇಖರ್ ಶರ್ಮಾ ಅವರನ್ನು ಭಾರತೀಯ ಉದ್ಯಮಶೀಲ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ನಾಯಕ ಎಂದು ಪರಿಗಣಿಸಲಾಗುತ್ತದೆ. ಪೇಟಿಎಂ ಪ್ರಸ್ತುತ ಪಡಿಸಿರುವ ಕ್ಯಾಶ್‍ಬ್ಯಾಕ್ ಆಫರ್ ಭಾರತದ ಲಕ್ಷಾಂತರ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಗಳಿಗೆ ಹೊಸತನದ ಹಾದಿ ಕಂಡುಕೊಳ್ಳಲು ಉತ್ತೇಜಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಶಾಪ್ಸಿ ಮೂಲಕ ಬೇರೆಯವರಿಗೆ ವಸ್ತುಗಳನ್ನು ಬುಕ್‍ ಮಾಡಿಕೊಡಿ, ನೀವು ಕಮಿಷನ್‍ ಪಡೆಯಿರಿ!

Advertisement

Udayavani is now on Telegram. Click here to join our channel and stay updated with the latest news.

Next