Advertisement

ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Store‌ನಲ್ಲಿ ಪ್ರತ್ಯಕ್ಷವಾದ Paytm !

07:54 PM Sep 18, 2020 | Karthik A |

ಮಣಿಪಾಲ: ಪೇಮೆಂಟ್ ಆ್ಯಪ್ ಪೇಟಿಎಂ ಅಚ್ಚರಿ ಎಂಬಂತೆ ಗೂಗಲ್ ಪ್ಲೇ ಸ್ಟೋರ್ ನಿಂದ ಕಣ್ಮರೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ Update: And we’re back! ಎಂದು Paytm ಟ್ವೀಟ್‌ ಮಾಡಿದೆ.

Advertisement

One 97 Communication Ltd. ಪೇಟಿಎಂ ಮಾಲಿಕತ್ವವನ್ನು ಹೊಂದಿದ್ದು, ಬೆಳಗ್ಗೆ ತನ್ನ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಈ ಆ್ಯಪ್  ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಮಾಡಲಾಗಿತ್ತು.

ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿತ್ತು.

IPL ಆರಂಭದ ಮುನ್ನಾದಿನ Paytmಗೆ ಶಾಕ್‌ ಕೊಟ್ಟಿದ್ದು ಯಾಕೆ ಗೊತ್ತಾ?

Advertisement

ಕೆಲವೊಂದು ಸಂಭಾವ್ಯ ಹಾನಿಯಿಂದ ಬಳಕೆದಾರರನ್ನು ರಕ್ಷಿಸಲು ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಯಾವುದೇ ಅಪ್ಲಿಕೇಶನ್ ಗಳು ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್‌ಗೆ ಮಾಹಿತಿ ನೀಡುತ್ತೇವೆ.  ಆದರೇ ಆ್ಯಪ್ ಡೆವಲಪರ್ ಗಳು ಈ ನೀತಿಗಳನ್ನು ಅನುಸರಿಸದಿದ್ದರೇ ಪ್ಲೇಸ್ಟೋರ್ ನಿಂದ ಅವನ್ನು ತೆಗೆದುಹಾಕಲಾಗುವುದು. ಹೊಸ ನೀತಿಗಳನ್ನು ಅಳವಡಿಸಿಕೊಂಡರೇ ಮಾತ್ರ ಅಂತಹ ಆ್ಯಪ್ ಗಳಿಗೆ ಪ್ಲೇಸ್ಟೋರ್ ನಲ್ಲಿ ಜಾಗವಿರುತ್ತದೆ. ಅದಾಗ್ಯೂ 2ನೇ ಬಾರಿ ಗೂಗಲ್ ನಿಯಮ ಉಲ್ಲಂಘಿಸಿದರೇ ಹೆಚ್ಚು ಗಂಭೀರವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಗೂಗಲ್ ಆ್ಯಂಡ್ರಾಯ್ಡ್ ಸೆಕ್ಯೂರಿಟಿ ಮತ್ತು ಪ್ರೈವಸಿಯ ಉಪಾಧ್ಯಕ್ಷ ಸುಝಾನೆ ಫ್ರೇ  ಈ ಬೆಳವಣಿಗೆ ಬಳಿಕ ಮಾಹಿತಿ ನೀಡಿದ್ದರು.

ಆನ್ ಲೈನ್ ಕ್ಯಾಸಿನೋ ಮತ್ತು ಜೂಜು ಅಥವಾ ಸ್ಪೋರ್ಟ್ಸ್ ಬೆಟ್ಟಿಂಗ್ ಕುರಿತಾದ ಆ್ಯಪ್ ಗಳನ್ನು ಗೂಗಲ್ ಪ್ರೋತ್ಸಾಹಿಸುವುದಿಲ್ಲ.  ಇಂತಹ ಆ್ಯಪ್ ಗಳ  ಜಾಹೀರಾತು ಅಥವಾ ಲಿಂಕ್ ಹಂಚಿಕೊಳ್ಳುವುದು ಹಾಗೂ ಥರ್ಢ್ ಪಾರ್ಟಿ ಆ್ಯಪ್ ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗುತ್ತದೆ ಎಂದಿತ್ತು ಗೂಗಲ್‌ ಪ್ಲೇ ಸ್ಟೋರ್‌.

ಈ ಕಾರಣಕ್ಕಾಗಿ ಪೇಟಿಎಂ ಅಪ್ಲಿಕೇಶನ್ ನನ್ನು ರಿಮೂವ್ ಮಾಡಲಾಗಿತ್ತು. ಪೇಟಿಎಂ ಭಾರತೀಯ ಮೂಲದ ಕಂಪೆನಿ One 97 Communication Ltd. ಮಾಲಿಕತ್ವವನ್ನು ಹೊಂದಿದ್ದು, ವಿಜಯ್ ಶಂಕರ್ ಶರ್ಮಾ ಇದರ ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಚೀನಾದ ಆಲಿಬಾಬ ಗ್ರೂಪ್ ನ ಮಿತ್ರ ಸಂಸ್ಥೆ  fintech firm Ant Financials ನಿಂದ ಭಾರೀ ಹಣವನ್ನು ಪಡೆದಿದೆ ಎಂದು ವರದಿಗಳು ಈ ಬೆಳವಣಿಗೆ ಬಳಿಕ ಹರಿದಾಡುತ್ತಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next