Advertisement

Paytm ಯುಪಿಐ ಸೇವೆ ಮುಂದುವರಿಸಲು ಅವಕಾಶ

01:22 PM Mar 20, 2024 | Team Udayavani |

ಮುಂಬಯಿ: ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್ಸಿ ಮತ್ತು ಯೆಸ್‌ ಬ್ಯಾಂಕ್‌ ಮೂಲಕ ಯುಪಿಐ ಕಾರ್ಯಾಚರಣೆ ಮುಂದುವರಿಸಲು ಪೇಟಿಎಂಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಅವಕಾಶ ನೀಡಿದೆ. ಈ ಮೂಲಕ ಪೇಟಿಎಂ ಬಳಕೆದಾರರು ಯುಪಿಐ ಪಾವತಿ ಮುಂದುವರಿಸಬಹುದಾಗಿದೆ.

Advertisement

ಮಾ.15ರ ಅನಂತರ ಯಾವುದೇ ಗ್ರಾಹಕರ ಖಾತೆಗಳಿಗೆ ಠೇವಣಿ, ಸಾಲ ವರ್ಗಾವಣೆ, ಟಾಪ್‌ ಅಪ್‌ಗ್ಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿ.(ಪಿಪಿಬಿಎಲ್‌)ಗೆ ಆರ್‌ಬಿಐ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಪೇಟಿಎಂ ಆ್ಯಪ್‌ ಹೊಂದಿರುವ ಬಳಕೆದಾರರು ಯುಪಿಐ ಪಾವತಿ ಗಳನ್ನು ಮುಂದುವರಿಸಲು ಎನ್‌ಪಿಸಿಐ ಅನುಮೋದನೆ ನೀಡಿದೆ.

ಆರ್‌ಬಿಐ ನಿರ್ಬಂಧದ ನಡುವೆ ಶೇ.20ರಷ್ಟು ಉದ್ಯೋಗಿಗಳ ವಜಾಗೆ ಪಿಪಿಬಿಎಲ್‌ ಮುಂದಾ ಗಿದೆ. 2023ರ ಡಿಸೆಂಬರ್‌ನ ಮಾಹಿತಿ ಪ್ರಕಾರ, ಪಿಪಿಬಿಎಲ್‌ನಲ್ಲಿ ಒಟ್ಟು 2,275 ಉದ್ಯೋಗಿಗಳು ಕಾರ್ಯನಿರ್ವಹಿ­ಸುತ್ತಿದ್ದಾರೆ.

ಪಿಪಿಬಿಎಲ್‌ ಖಾತೆ ಹೊಂದಿರುವ ಗ್ರಾಹಕರಿಗೆ ಶುಕ್ರವಾರದ ಬಳಿಕ‌ ಠೇವಣಿ, ವೇತನ ಪಾವತಿ, ಇತರ ಪಾವತಿ ಸಾಧ್ಯವಿಲ್ಲ. ಪಿಪಿಬಿಎಲ್‌ ಲಿಂಕ್‌ ಆಗಿರುವ ಖಾತೆಗಳಿಂದ ಯುಪಿಐ ಸಾಧ್ಯವಿಲ್ಲ. ಜತೆಗೆ ಫಾಸ್ಟಾಗ್‌, ಐಎಂಪಿಎಸ್‌ ಕಾರ್ಯಾಚರಣೆ ಸಾಧ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next