ಹೈದರಾಬಾದ್: ಸೆಲೆಬ್ರಿಟಿಗಳು ಬೋಲ್ಡ್ ಲುಕ್ ವುಳ್ಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ನಟಿಯೊಬ್ಬರು ಹಾಟ್ ಲುಕ್ ನ ಪೋಟೋ ಹಂಚಿಕೊಂಡು ಬಾಯ್ ಫ್ರೆಂಡ್ ಗೆ ಬರ್ತ್ ಡೇ ವಿಶ್ ಮಾಡಿಕೊಂಡಿದ್ದು ವೈರಲ್ ಆಗಿದೆ.
ʼಆರ್ ಎಕ್ಸ್ 100ʼ ಬೆಡಗಿ ಪಾಯಲ್ ರಜಪೂತ್ ತಮ್ಮ ಬಾಯ್ ಫ್ರೆಂಡ್ ಸೌರಭ್ ಧಿಂಗ್ರಾ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಬರೀ ಶುಭಕೋರಿದ್ದರೆ ವೈರಲ್ ಆಗುತ್ತಿರಲಿಲ್ಲ. ಶರ್ಟ್ ಬಿಚ್ಚಿ ಅಪ್ಪಿಕೊಂಡು ಬಾಯ್ ಫ್ರೆಂಡ್ ಬರ್ತ್ ಡೇಗೆ ವಿಶ್ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ವರ್ಷಗಳು ನಿಜವಾಗಿಯೂ ನಿಮಗೆ ಕಠಿಣವಾಗಿವೆ ಎಂದು ತಿಳಿದಿದೆ. ಜೀವನವು ಕಠಿಣವಾಗಿದೆ, ಆದರೆ ನೀವು ಕಠಿಣವಾಗಿಯೇ ಇದ್ದೀರಿ. ನನ್ನ ನೆಚ್ಚಿನ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಗು ಮತ್ತು ಪ್ರೀತಿ ನನ್ನ ಜೀವನವನ್ನು ಸಂತೋಷವಾಗಿರಿಸಿದೆ ಎಂದು ವಿಶ್ ಮಾಡಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ನಟಿಯ ಫೋಟೋ ಕುರಿತು ನಾನಾ ಬಗೆಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಪಾಯಲ್ ಇತ್ತೀಚೆಗೆ ʼ ಗಿನ್ನಾʼ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.