Advertisement

ಕೃಷಿ, ತೋಟಗಾರಿಕೆ ಬೆಳೆಗೆ ಸೂಕ್ತ ಬೆಲೆ ನೀಡಿ

05:35 PM Dec 01, 2020 | Suhan S |

ರಾಮನಗರ: ರೇಷ್ಮೆಗೂಡಿಗೆ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ನಿಗದಿತ ಬೆಲೆ, ಜಿಲ್ಲೆಯಲ್ಲಿನ ಅಕ್ರಮಗಳ ವಿರುದ್ಧ ಕ್ರಮ ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ (ರೈತಬಣ)ದ ಜಿಲ್ಲಾ ಘಟಕವನ್ನು ಅಸ್ತಿತ್ವಕ್ಕೆ ತಂದಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಇ.ಎನ್‌.ಕೃಷ್ಣ ಇಂಗಲಗುಪ್ಪೆ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಂಘಟನೆ ಈಗಾಗಲೇ ಭೂಸ್ವಾಧೀನ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ದೊಡ್ಡ ಮಟ್ಟದ ಹೋರಾಟಗಳನ್ನುನಡೆಸಿದೆ, ರಾಮನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ರೈತರ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷತನ ವಿಚಾರದಲ್ಲಿಯೂ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ಪರಿಯ ಅಕ್ರಮಗಳು ನಡೆಯುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮುಂತಾದ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಬಂಗಾರಪ್ಪ ನೇತೃತ್ವದ ಸರ್ಕಾರ ರೈತ ಪರ ಸರ್ಕಾರವಾಗಿತ್ತು. ತದನಂತರ ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಎಲ್ಲ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫ‌ಲವಾಗಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ವಿದ್ಯುತ್‌ಗೆ ಮೀಟರ್‌ ಅಳವಡಿಸುತ್ತಾರಂತೆ, ಮೊದಲು ಕೃಷಿ ಬೆಳೆಗೆ ಮಾರುಕಟ್ಟೆ ಬೆಲೆ ನಿಗದಿ ಮಾಡಿ ನಂತರ ಮೀಟರ್‌ ಅಳವಡಿಸಲಿ ಎಂದು ಹೇಳಿದರು.

ಡಿ.5 ರಂದು ಮರಾಠಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ವಾಟಾಳ್‌ನಾಗರಾಜ್‌ ನೇತೃತ್ವದಲ್ಲಿ ನೀಡಿರುವಕರೆಗೆ ಬೆಂಬಲ ವ್ಯಕ್ತಪಡಿಸಿದರು.ನೂತನ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮಾತನಾಡಿ, ತಾಲೂಕು ಕಚೇರಿಗಳಲ್ಲಿ ವಿನಾಕಾರಣ ರೈತರನ್ನು ಅಲೆದಾಡಿಸುತ್ತಿರುವುದು, ರೈತರ ಕೆಲಸಗಳ ಬಗ್ಗೆ ಅಧಿಕಾರಿಗಳ ನಿರ್ಲಿಪ್ತತೆ, ಎಷ್ಟೇ ಪ್ರಭಾವಿಗಳಾಗಿದ್ದರೂ ಅಕ್ರಮಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Advertisement

ಗೋಷ್ಠಿಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಮಂಜು, ಸಂಘಟನೆವರಿಷ್ಠಹೆಮ್ಮಿಗೆಚಂದ್ರಶೇಖರ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾನಾರಾಯಣಸ್ವಾಮಿ, ಉಪಾಧ್ಯಕ್ಷೆ ಲಲಿತಾ ಸಿದ್ದರಾಜು, ಕಾರ್ಯದರ್ಶಿ ಯಶೋದಮ್ಮ, ಮೈಸೂರು ಜಿಲ್ಲಾ ಅಧ್ಯಕ್ಷರಾದ ಕೃಷ್ಟರಾಜಅರಸುಮತ್ತಿತರರು ಇದ್ದರು. ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳು: ರೈತ ಬಣದಜಿಲ್ಲಾಧ್ಯಕ್ಷರಾಗಿ ಪಿ.ಎಂ.ರವಿ, ಉಪಾಧ್ಯಕ್ಷರಾಗಿ ಬಿ.ಎಂ.ಶಿವಲಿಂಗಯ್ಯ, ಕಾರ್ಯದರ್ಶಿಯಾಗಿಶಿವರಾಜು.ಬಿ, ಖಜಾಂಚಿ ನಾಗೇಶ್‌ ಹಾಗು ಮಹಿಳಾಘಟಕದ ಅಧ್ಯಕ್ಷರಾಗಿ ಗೀತಾನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.

ತಾಲೂಕು ಪದಾಧಿಕಾರಿಗಳು :  ರಾಮನಗರ ತಾಲೂಕು ಘಟಕದ ಅಧ್ಯಕ್ಷರಾಗಿ ವೆಂಕಟೇಶ್‌ ಎಸ್‌.ಎಲ್‌.ವಿ. ಉಪಾಧ್ಯಕ್ಷರಾಗಿ ತಮ್ಮಣ್ಣ, ಕಾರ್ಯದರ್ಶಿಯಾಗಿ ಮುರಳೀಧರ್‌, ಖಜಾಂಚಿಯಾಗಿ ವೆಂಕಟೇಶ್‌ ವಿ., ಕನಕಪುರ ತಾಲೂಕು ಘಟಕದ ಅಧ್ಯಕ್ಷರಾಗಿ ಶಿವಣ್ಣ ಬಿ., ಉಪಾಧ್ಯಕ್ಷರಾಗಿ ನಾಗರಾಜು, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿರವಿಎಂ.ಸಿ.,ಚನ್ನಪಟ್ಟಣತಾಲೂಕುಘಟಕಾಧ್ಯಕ್ಷರಾಗಿ ಕೆಂಚೇಗೌಡ ಎಸ್‌.ಎಲ್‌. ಉಪಾಧ್ಯಕ್ಷ ಚಂದ್ರು,ಕಾರ್ಯದರ್ಶಿ ರಮೇಶ್‌ ಎಸ್‌.ಎಮ್‌., ಖಜಾಂಚಿಕಿರಣ್‌. ಮಾಗಡಿ ತಾಲೂಕು ಘಟಕಾಧ್ಯಕ್ಷರಾಗಿ ಕೇಶವಮೂರ್ತಿ, ಉಪಾಧ್ಯಕ್ಷರಾಗಿ ಪುನೀತ್‌.ಕೆ.,ಕಾರ್ಯ ದರ್ಶಿಯಾಗಿ ಪ್ರವೀಣ್‌.ಎನ್‌, ಖಜಾಂಚಿ ಮುತ್ತು ರಾಜ್‌ ನೇಮಕವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next