Advertisement

ಪೇಟಿಎಂ ಮೂಲಕ ದಂಡ ಪಾವತಿಸಿ

10:32 AM Jul 06, 2021 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಕಟ್ಟಲು ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಹಾಗೂ ನಗದು ರೂಪದ ಜತೆಗೆ ಈಗ ಆನ್‌ಲೈನ್‌ ಪೇಮೆಂಟ್‌ಗೂ ಪೊಲೀಸರು ಅವಕಾಶ ಸೃಷ್ಟಿಸಿದ್ದಾರೆ.

Advertisement

“ಪೇಟಿಎಂ’ ಮೂಲಕ ಆನ್‌ಲೈನ್‌ನಲ್ಲೇ ಸ್ಥಳದಲ್ಲೇ ದಂಡ ಪಾವತಿಗೆ ಅವಕಾಶ ನೀಡುವ ಪ್ರಕ್ರಿಯೆಗೆ ಸೋಮವಾರ ಬೆಳಗ್ಗೆ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ನಗರಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ವಾಹನ ಸವಾರರು, ನಗದು, ಕ್ರೆಡಿಟ್‌, ಡೆಬಿಟ್‌ಕಾರ್ಡ್‌ ಗಳು ಇಲ್ಲ ಎಂದು ಕಾರಣಗಳನ್ನು ಹೇಳುತ್ತಿದ್ದರು. ಇದೀಗ ಪೇಟಿಎಂ ಮೂಲಕ ಆನ್‌ಲೈನ್‌ನಲ್ಲಿಯೇ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಈಹಿಂದಿನ ಸಾಕಷ್ಟು ಪ್ರಕರಣಗಳ ದಂಡ ವಸೂಲಿಯಾಗಲಿದೆ ಎಂದರು.

ಉಲ್ಲಂಘನೆಗಳ ನೋಟಿಪಿಕೇಷನ್‌: ಈ ಹಿಂದೆ ಸಂಚಾರ ಪೊಲೀಸರು ಅನೇಕಸಂಪರ್ಕರಹಿತ ವಿಧಾನಗಳಿಂದ ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿದ್ದು, ಸಂಬಂಧಿಸಿದವರಿಗೆ ರಸೀದಿ ಮೂಲಕ ಚಲನ್‌ ಕೊಡಲಾಗುತ್ತಿತ್ತು.ಆದರೆ, ಡಿಜಿಟಲ್‌ ರಸೀದಿಗೆ ಅವಕಾಶಇರಲಿಲ್ಲ. ಜತೆಗೆ ಡಿಜಿಟಲ್‌ ರೂಪದಲ್ಲಿಪಾವತಿ ಮಾಡಲು ಬೆಂಗಳೂರು ಒನ್‌,ವೆಬ್‌ಸೈಟ್‌, ಪಿಡಿಎ ಯಂತ್ರಗಳಲ್ಲಿ ಅವ ಕಾಶವಿತ್ತು. ಆದರೆ, ಪೇಟಿಎಂನಲ್ಲಿ ಅವಕಾಶ ಇರಲಿಲ್ಲ.

ಪೇಟಿಎಂ ಮತ್ತು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಸಹಯೋಗದಲ್ಲಿ ಈ ಹೊಸ ಪ್ರಕ್ರಿಯೆ ಬಂದಿದ್ದು, ಡಿಜಿಟಲ್‌ ಪಾವತಿ ಮತ್ತು ತಮ್ಮ ಗ್ರಾಹಕರಿಗೆ ಉಲ್ಲಂಘನೆ ನೋಟಿಫಿಕೇಷನ್‌ಗಳನ್ನು ಕಳುಹಿಸಿ ಡಿಜಿಟಲ್‌ ಪಾವತಿಗೆ ಸೌಲಭ್ಯ ಕಲ್ಪಿಸಲಾಗಿದೆ. ರಸ್ತೆ ಸುರಕ್ಷತೆ ಸಾಮಾಜಿಕ ಜವಾಬ್ದಾರಿ ಹೊತ್ತು ಪೇಟಿಎಂ ಕಂಪನಿಯು ಈ ಹೊಸ ಸೌಲಭ್ಯ ನೀಡುತ್ತಿದೆ. ಟೆಲಿಬ್ರಹ್ಮ ಸಾಫ್ಟ್ವೇರ್‌ ಸರ್ವೀಸಸ್‌ ಸಹಯೋಗದಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದೆ ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌. ರವಿಕಾಂತೇಗೌಡ ತಿಳಿಸಿದರು.

Advertisement

ದಂಡ ಪಾವತಿ ಹೇಗೆ? :

ಪೇಟಿಯಂ ಸರ್ಚ್‌ನಲ್ಲಿ ರಿಚಾರ್ಜ್‌ ಅಥವಾ ಚಲನ್‌ ಎಂದು ಆಯ್ಕೆ ಮಾಡಬೇಕು. ಬಳಿಕ ಬೆಂಗಳೂರು ಸಂಚಾರ ಪೊಲೀಸರು(ಬಿಟಿಪಿ) ಆಯ್ಕೆ ಮಾಡಿ, ವಾಹನ ನೋಂದಣಿ ಸಂಖ್ಯೆ ದಾಖಲಿಸಿ, ವಿವರ ಪರಿಶೀಲಿಸಿ, ದಂಡ ಪಾವತಿಸುವ ಚಲನ್‌ಗಳನ್ನು ಸೆಲೆಕ್ಟ್ ಮಾಡಿ ಮುಂದುವರಿಯಬೇಕು. ಜತೆಗೆ ಡೆಬಿಟ್‌,ಕ್ರೆಡಿಟ್‌ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಮತ್ತು ಯುಪಿಎ ಮೂಲಕ ಹಣ ಪಾವತಿಸಬಹುದು. ರಸೀದಿಯು ಅಲ್ಲೆ ಸಿಗುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next