Advertisement
ಫೆ. 17ರಂದು ಪುಣೆಯ ಕರ್ವೆನಗರದ ಎಂ. ಎಸ್. ಭಟ್. ಅವರ ದುರ್ಗಾ ಸದನದಲ್ಲಿ ನಡೆದ ಸಭೆಯಲ್ಲಿ ಪುಲ್ವಾಮದಲ್ಲಿ ಪಾಕಿಸ್ಥಾನದ ಪಿತೂರಿಯಿಂದ ನಡೆದ ನರರಾಕ್ಷಸರ ಪೈಶಾಚಿಕ ಕೃತ್ಯವನ್ನು ಸಂಘ ಬಲವಾಗಿ ಖಂಡಿಸಿದ್ದಲ್ಲದೆ ಸೇರಿದ್ದ ಸದಸ್ಯರೆಲ್ಲರೂ ಪುಷ್ಪನಮನವನ್ನು ಸಲ್ಲಿಸಿ ಮೌನ ಪ್ರಾರ್ಥನೆಯ ಮೂಲಕ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ದೇಶ ಕಾಯುವ ಯೋಧರ ಬಗ್ಗೆ ನಮಗೆಲ್ಲರಿಗೂ ಅಪಾರವಾದ ಅಭಿಮಾನವಿದೆ. ನಿವೃತ್ತ ವೀರಯೋಧರಾದ ಇ. ವಿ. ಶಾಮರಾಜ್ ಇವರನ್ನು ನಾವು ಹತ್ತಿರದಿಂದ ಬಲ್ಲವ ರಾಗಿದ್ದು ಅವರ ಮನೋಬಲ, ಆತ್ಮ ಸ್ಥೈರ್ಯ, ದೇಶಪ್ರೇಮ, ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಫೆ. 14ರಂದು ಭಯೋ ತ್ಪಾದಕರ ಕುತಂತ್ರಕ್ಕೆ ನಮ್ಮ ಯೋಧರು ಬಲಿಯಾಗಿದ್ದು ದೇಶವಾಸಿಗಳಾದ ನಾವೆಲ್ಲರೂ ವೀರ ಹುತಾತ್ಮ ಯೋಧರ ದುಃಖದಲ್ಲಿ ಸಹಭಾಗಿಗಳಾಗಿದ್ದೇವೆ. ಇಂಥ ನೀಚಕೃತ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ.
Related Articles
Advertisement
ಈ ಸಂದರ್ಭ ಸೇರಿದ್ದ ಸದಸ್ಯರೆಲ್ಲರೂ ರಾಮತಾರಕ ಮಂತ್ರ ಹಾಗೂ ಭಜನಾ ರಾಮಾಯಣವನ್ನು ಸಾಮೂಹಿಕವಾಗಿ ಪಠಿಸಿ ಸೇನೆಗೆ ಧೈರ್ಯ, ಸ್ಥೈರ್ಯಕ್ಕಾಗಿ ಪ್ರಾರ್ಥಿಸಲಾಯಿತು. ಸಭೆಯಲ್ಲಿ ಕಾರ್ಯಕ್ರಮ ಸಂಯೋಜಕ ಹಿರಿಯರಾದ ಮಹಾಬಲ ಭಟ್, ಕಾರ್ಯದರ್ಶಿ ಶ್ಯಾಮಸುಂದರ್ ಭಟ್, ಕೋಶಾಧಿಕಾರಿ ಗಣೇಶ್ ಪ್ರಸಾದ್, ಮದಂಗಲ್ಲು ಅಶೋಕ್ ಭಟ್, ವೆಂಕಟ್ರಮಣ ಭಟ್, ಕೌಶಲ್ ಭಟ್, ರಾಮಚಂದ್ರ ಭಟ್, ಶಾರದಾ ಭಟ್, ಮಹಿಳಾ ವಿಭಾಗದ ಸದಸ್ಯರಾದ ಮದಂಗಲ್ಲು ಹೇಮಾ ಎ. ಭಟ್, ಮಲ್ಲಿಕಾ ಭಟ್, ಜಯಲಕ್ಷ್ಮೀಭಟ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು