Advertisement
ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕ, ಸೇವಾಕರ್ತರು ನಡುವೆಯಿರುವ ವ್ಯಾಜ್ಯವು ಇನ್ನೂ ನ್ಯಾಯಾಲಯದಲ್ಲಿದ್ದು ಯಲಗೂರೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮದ ಮುಖಂಡರು, ಸಿಂಡಿಕೇಟ್ ಬ್ಯಾಂಕ್, ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಎಣಿಕೆ ಕಾರ್ಯ ಪೂರ್ಣಗೊಂಡಾಗ 49,07,345 ರೂ. ನಗದು ಹಾಗೂ 25 ಗ್ರಾಂ ಚಿನ್ನ ಹಾಗೂ 285 ಗ್ರಾಂ ಬೆಳ್ಳಿ ದೊರೆಯಿತು.
Related Articles
Advertisement
ಬಸವನಬಾಗೇವಾಡಿ ಸಿಪಿಐ ಮಹಾದೇವ ಶಿರಹಟ್ಟಿ ನೇತೃತ್ವದಲ್ಲಿ ಆಲಮಟ್ಟಿ, ನಿಡಗುಂದಿ ಇಬ್ಬರು ಪಿಎಸೈಗಳು, ಇಬ್ಬರು ಎಎಸೈಗಳು ಹಾಗೂ 18ಕ್ಕೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
2008ರಿಂದ ಇಂದಿನವರೆಗೂ ಒಟ್ಟು ಮೂರು ಬಾರಿ ದೇವಸ್ಥಾನದಲ್ಲಿರುವ ಹುಂಡಿ ತೆರೆಯಲಾಗಿದ್ದು ಅವುಗಳಿಂದ ಒಟ್ಟು 1,48,25,116 ರೂ. ನಗದು ಹಾಗೂ 115 ಗ್ರಾಂ ಚಿನ್ನ ಮತ್ತು 685 ಗ್ರಾಂಗಿಂತ ಹೆಚ್ಚು ಬೆಳ್ಳಿಯನ್ನು ಬ್ಯಾಂಕಿಗೆ ಜಮಾ ಮಾಡಲಾಗಿದೆ.
ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಅನಂತ ಓಂಕಾರ, ಗೋಪಾಲ ಗದ್ದನಕೇರಿ, ಜಿ.ಬಿ. ಕುಲಕರ್ಣಿ, ಗುರುರಾಜ ಪರ್ವತಿಕರ, ಗುಂಡಪ್ಪ ಪೂಜಾರಿ, ಶ್ಯಾಮ ಪಾತರದ, ಯಲಗೂರಪ್ಪ ಪೂಜಾರಿ, ನ್ಯಾಯವಾದಿ ಎಸ್.ಐ. ಡೆಂಗಿ, ಬಿ.ವೈ. ಅವಟಿಗೇರ, ಜಿ.ಬಿ. ತಳವಾರ, ಲಕ್ಷ್ಮಣಗೌಡ ಪಾಟೀಲ, ಭೀಮಪ್ಪ ಪೂಜಾರಿ, ಮಹಾಂತೇಶ ಡೆಂಗಿ ಇದ್ದರು.
ದೇವಸ್ಥಾನ ಹುಂಡಿಯಲ್ಲಿ ದೊರೆತಿರುವ ನೋಟುಗಳು ಹಾಗೂ ನಾಣ್ಯಗಳ ಮಧ್ಯದಲ್ಲಿ ಲಂಡನ್ನಿನ 1 ಪೌಂಡ್, ನ್ಯೂಜಿಲೆಂಡಿನ 20 ಡಾಲರ್ ಹಾಗೂ ಸೌದಿ ಅರೇಬಿಯಾದ ನಾಣ್ಯಗಳು ದೊರೆತಿವೆ. ಯಲಗೂರೇಶನ ಭಕ್ತರು ವಿದೇಶಗಳಲ್ಲಿಯೂ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹೇಳಿದರು.
ವಿದೇಶಿ ಕರೆನ್ಸಿದೇವಸ್ಥಾನ ಹುಂಡಿಯಲ್ಲಿ ದೊರೆತಿರುವ ನೋಟುಗಳು ಹಾಗೂ ನಾಣ್ಯಗಳ ಮಧ್ಯದಲ್ಲಿ ಲಂಡನ್ನಿನ 1 ಪೌಂಡ್, ನ್ಯೂಜಿಲೆಂಡಿನ 20 ಡಾಲರ್ ಹಾಗೂ ಸೌದಿ ಅರೇಬಿಯಾದ ನಾಣ್ಯಗಳು ದೊರೆತಿವೆ. ಯಲಗೂರೇಶನ ಭಕ್ತರು ವಿದೇಶಗಳಲ್ಲಿಯೂ ಇದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಹೇಳಿದರು. ಕಾಗದದಲ್ಲಿ ಇಷ್ಟಾರ್ಥ ನಿವೇದಿಸಿಕೊಂಡ ಭಕ್ತರು
ಆಲಮಟ್ಟಿ: ದೇವಸ್ಥಾನಗಳಿಗೆ ತೆರಳುವ ಭಕ್ತರು ತಮ್ಮ ಮನದಾಳದಲ್ಲಿ ತಮ್ಮ ಹರಕೆ ಈಡೇರಿಸಲು ಕೋರಿಕೊಳ್ಳುತ್ತಿದ್ದರೆ ಇನ್ನು ಕೆಲ ಭಕ್ತರು ತಮ್ಮ ಮನದಲ್ಲಿರುವ ವಿಷಯಗಳನ್ನು ಪತ್ರದ ಮೂಲಕ ಬರೆದು ನಿವೇದಿಸಿಕೊಂಡಿರುವುದು ಸಮೀಪದ ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದಲ್ಲಿರುವ ಹುಂಡಿಗಳನ್ನು ತೆರೆದ ವೇಲೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಪೂರೈಸಲೆಂದು ದೇವರಲ್ಲಿ ಬಂಗಾರ, ಬೆಳ್ಳಿ, ಹಣ, ಸಕ್ಕರೆ, ಬೆಲ್ಲ ಹೀಗೆ ಹಲವಾರು ವಿಧಗಳಲ್ಲಿ ಹರಕೆ ಹೊರುವುದು ವಾಡಿಕೆ. ಆದರೆ ಪವನಸುತನ ಕಾಣಿಕೆ ಪೆಟ್ಟಿಗೆಯಲ್ಲಿ ಬಾಗಲಕೋಟೆ ಭಕ್ತರೊಬ್ಬರು ತನ್ನ ಸಂಬಂಧಿಕರು ಒಳ್ಳೆಯವರೆಂದು ನಂಬಿ ಒಟ್ಟು 16.5 ಲಕ್ಷ ರೂ.ಗಳನ್ನು ಗ್ರಾನೈಟ್ ಉದ್ಯೋಗದಲ್ಲಿ ತೊಡಗಿಸಿದ್ದು ಅವರು ತನ್ನ ಹಣ ಮರಳಿಸುತ್ತಿಲ್ಲ. ಅವರು ದೈವಿ ಭಕ್ತರಾಗಿದ್ದಾರೆ. ಅವರ ದೇವರುಗಳನ್ನೇ ನಾನೂ ನಂಬಿದ್ದೇನೆ. ಆದ್ದರಿಂದ ನಾನು ನನ್ನ ವೇತನದಲ್ಲಿ ಹಾಗೂ ಮನೆ ಮೇಲೆ ಸಾಲ ಮಾಡಿಕೊಂಡು ನೀಡಿರುವ ಹಣವನ್ನು ಮರಳಿಸಲು ಅವರಿಗೆ ದೈವಿ ಪ್ರೇರಣೆ ಮಾಡಬೇಕು ಎಂದು ಕೋರಿದ್ದಾರೆ. ತಾನು ಎಂಜಿನಿಯರಿಂಗ್‌ನ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದು ಎಲ್ಲ ಶ್ರೇಣಿಗಳಲ್ಲಿ ಪಾಸಾಗಿ, ಸುಂದರ ಗುಣವತಿ ಸತಿಯಾಗಬೇಕು. ಅಣ್ಣ ಹಾಗೂ ಅಕ್ಕಳಿಗೆ ನೌಕರಿ ಸಿಗಬೇಕು. ಅವರಿಗೂ ಗುಣವಂತರು ಸತಿ ಪತಿಗಳಾಬೇಕು ಎಂದು ಕೋರಿದ್ದಾರೆ. ಇನ್ನೊಬ್ಬರು ತನಗಿರುವ ವೈರಿಗಳಿಗೆ ಶಿಕ್ಷೆ ಕೊಟ್ಟು ತನಗೆ ಸಿರಿ ಸಂಪತ್ತನ್ನು ನೀಡಬೇಕು ಎಂದು ನಿವೇದಿಸಿಕೊಂಡಿದ್ದಾರೆ. ಅಂಧರೊಬ್ಬರು ತನಗೆ ಕಣ್ಣು ಕಾಣಿಸುತ್ತಿಲ್ಲವಾದ್ದರಿಂದ ಕಣ್ಣು ಕಾಣುವಂತೆ ಮಾಡಲು ಬೇಡಿಕೊಂಡಿದ್ದಾರೆ. ತನಗೆ ಸರ್ಕಾರಿ ನೌಕರಿ ದೊರಕಿದರೆ ಪಾದಯತ್ರೆ ಮೂಲಕ ಬಂದು ದರ್ಶನ ಪಡೆಯುತ್ತೇನೆ. ಇನ್ನೊಬ್ಬರು ತನಗೆ ಗಂಡು ಮಗು ಜನಿಸಿದರೆ ಮಗುವಿನ ಜವಳ ಹನುಮಂತನ ಸನ್ನಿಧಾನದಲ್ಲಿಯೇ ತೆಗೆಯುತ್ತೇನೆ. ಹೀಗೆ ಹತ್ತು ಹಲವು ಬೇಡಿಕೆಗಳ ಚೀಟಿಗಳು ಹುಂಡಿಯಲ್ಲಿ ದೊರಕಿವೆ. ಹುಂಡಿಗಳಿರುವುದೇ ಗುಪ್ತ ಕಾಣಿಕೆಗಳನ್ನು ಹಾಕುವುದಾಗಿದ್ದರಿಂದ ಕೆಲ ಭಕ್ತರು ಚಿನ್ನ ಹಾಗೂ ಬೆಳ್ಳಿ ಉಂಗುರ, ಕಣ್ಣಿನ ಬೊಟ್ಟುಗಳನ್ನು ಹಾಕಿದ್ದಾರೆ.