Advertisement

ಪವಿತ್ರ ವಸ್ತ್ರ ಅಭಿಯಾನಕ್ಕೆ ಚಾಲನೆ : ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ

12:27 PM Sep 19, 2021 | Team Udayavani |

ಶಿರಸಿ : ಹೆಗ್ಗೋಡು ಚರಕ ಸಂಸ್ಥೆ ರಾಜ್ಯಾದ್ಯಂತ ನಡೆಸುತ್ತಿರುವ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗು ಮಾರಾಟದ ಪವಿತ್ರ ವಸ್ತ್ರ ಅಭಿಯಾನ ನಗರದ ಟಿಎಸ್‌ಎಸ್ ಸಂಸ್ಥೆ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

Advertisement

ದೇಸೀ ಕೈ‌ಮಗ್ಗದಲ್ಲಿ ತಯಾರಿಸಲಾದ ಆಕರ್ಷಕ ವಸ್ತ್ರಗಳು, ಹುಲ್ಲಿನ ಬುಟ್ಟಿಗಳು, ಅಲಂಕಾರಿಕ ವಸ್ತುಗಳು, ನೈಸರ್ಗಿಕವಾಗಿ ಬೆಳೆದ ಬೆಳೆಗಳು, ಪ್ರದರ್ಶನ ಹಾಗೂ ಮಾರಾಟ ಇದಾಗಿದ್ದು, ನಾಲ್ಕು ದಿನಗಳ ಕಾಲ ನಡೆಯಲಿದೆ. ನಗರ ಹಾಗೂ ಗ್ರಾಮೀಣ ಭಾಗದ ಜನ ಆಗಮಿಸಿ ಪ್ರದರ್ಶನ ವೀಕ್ಷಿಸುವುದರ ಜತೆಯಲ್ಲಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಅನುಕೂಲ ಆಗುವಂತೆ‌ ನಾಲ್ಕು ದಿನಗಳ ಕಾಲ ನಡೆಸಲಾಗುತ್ತಿದೆ.

ಪ್ರಸಿದ್ದ ಸಹಕಾರಿ ಸಂಸ್ಥೆ
ಟಿಎಸ್‌ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಉದ್ಘಾಟಿಸಿದರು. ಚರಕ ಸಂಸ್ಥೆಯ ಆಶಾ ಮಾತನಾಡಿ, ಇಂದು ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳಿಗೆ ಮಹತ್ವವಿದ್ದು ಅದನ್ನು ಅರಿತುಕೊಳ್ಳಬೇಕು ಎಂದರು.

ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಚರಕ ಆಂದೊಲವನ್ನು ಗಾಂಧೀಜಿ ಆರಂಭಿಸಿದರು. ಈ ಮೂಲಕ ಬ್ರಿಟಿಷರನ್ನು ದೇಶಬಿಟ್ಟು ತೊಲಗಿಸಿದರು, ಕೈ ಮಗ್ಗ ಹಾಗೂ ದೇಶಿ ಚಿಂತನೆ ಬೆಳೆಸಿದರು. ಜನರ ಕೈಗೆ ದುಡಿಮೆ ನೀಡುವ ದ್ರಷ್ಟಿಯಿಂದ ದೇಶದಲ್ಲಿ ಬಟ್ಟೆಗಳನ್ನು ಹೆಚ್ಚೆಚ್ಚು ಮಾರಾಟ ಮಾಡಬೇಕು ಎಂದರು.

Advertisement

ಟಿಎಸ್‌ಎಸ್ ನಿರ್ದೇಶಕ ಗಣಪತಿ ರಾಯ್ಸದ ಉಪಸ್ಥಿತರಿದ್ದರು. ರಂಗಕರ್ಮಿ ಶ್ರೀಪಾದ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next