Advertisement
ಹಳೆಯಂಗಡಿ: ಬೆಳೆಯುತ್ತಿರುವ ಪಟ್ಟಣವಾಗಿರುವ ಹಳೆಯಂಗಡಿಯ ರಾ.ಹೆ. 66ರಲ್ಲಿ ವಿಭಜನೆಯಾಗಿರುವ ಪಾವಂಜೆ ಗ್ರಾಮ ಹೆಚ್ಚಾಗಿ ನಂದಿನಿ ನದಿಯ ತೀರ ಪ್ರದೇಶವಾಗಿದೆ. ನದಿ ಪಕ್ಕದಲ್ಲಿ ಕೃಷಿ ಭೂಮಿ ಹೆಚ್ಚಾಗಿ ಇದ್ದು ಉಪ್ಪು ನೀರಿನ ಹಾವಳಿಯಿಂದ ಆಗಾಗ ತೊಂದರೆಗೀಡಾಗುವ ಪರಿಸ್ಥಿತಿ ಹೆಚ್ಚಾಗಿದೆ.
Related Articles
Advertisement
ಇತ್ತೀಚೆಗೆ ತೌಖೆ¤à ಚಂಡಮಾರುತದ ಪರಿಣಾಮ ಕೊಳುವೈಲು ಪ್ರದೇಶದಲ್ಲಿ ಉಪ್ಪು ನೀರು ನುಗ್ಗಿ ಫಲವತ್ತಾದ ಕೃಷಿ ಭೂಮಿ ಹಾನಿಯಾಗಿದೆ. ಇಲ್ಲಿನ ಬಾವಿಗಳಲ್ಲಿಯೂ ಉಪ್ಪು ನೀರು ತುಂಬಿ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಇದಕ್ಕೆ ಪೂರಕವಾಗಿ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಬೇಕಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆ ನಿವಾರಣೆಯಾಗಬಹುದು. ಉಪ್ಪು ನೀರಿನ ಹಾವಳಿಯಿಂದ ಕನಿಷ್ಠ ಎರಡು ವರ್ಷಗಳ ಕಾಲ ಕೃಷಿ ಕಾಯಕ ಮಾಡದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕರು.
ಇತರ ಸಮಸ್ಯೆಗಳೇನು? :
- ಅರಾಂದ್-ಸಸಿಹಿತ್ಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಅಗತ್ಯವಿದೆ.
- ಅರಾಂದ್, ಕೊಳುವೈಲು ಪ್ರದೇಶದಲ್ಲಿರುವ ಕಿಂಡಿ ಅಣೆಕಟ್ಟಿನ ನಿರ್ವಹಣೆಯಾಗಬೇಕಿದೆ.
- ಪಾವಂಜೆ ಮೂರು ದೇವಸ್ಥಾನಗಳ ವಠಾರದಲ್ಲಿರುವ ಕೆರೆಯ ಅಭಿವೃದ್ಧಿಯಾಗಬೇಕಿದೆ.
- ಪಾವಂಜೆ ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕಿದೆ.
- ಕೊಳುವೈಲು ಬದಿ ಬದಿಯ ಸಮಸ್ಯೆಗೆ ಪರಿಹಾರ ಅಗತ್ಯ.
- ರಾಮನಗರದಲ್ಲಿ ರಸ್ತೆಯ ಪ್ರಗತಿ.
- ಹೆದ್ದಾರಿ ಸೇತುವೆಯ ಅಡಿಯಲ್ಲಿ ಕಿಡಿಗೇಡಿಗಳಿಂದ ನಡೆಯುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.