Advertisement
ವಕೀಲ ಕೃಷ್ಣನಾಯ್ಕ, ರವಿಶಂಕರ್ ನಾಯ್ಕ, ಕೊತ್ತೂರು ಹನುಮಂತರಾಯಪ್ಪ, ಸಾಕೇಲ ಶಿವಕುಮಾರ್ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದು, ಯಾರಿಗೆ ಟಿಕೆಟ್ ಸಿಗುತ್ತೆ ಕಾದು ನೋಡಬೇಕು. ಇನ್ನು ಆಮ್ ಆದ್ಮಿ ಪಕ್ಷದಿಂದ ರಾಮಾಂಜಿನಪ್ಪ, ಕೆ.ಆರ್.ಎಸ್.ಪಕ್ಷದಿಂದ ಗೋವಿಂದಪ್ಪ ಆಕಾಂಕ್ಷಿಗಳಾಗಿದ್ದಾರೆ.
Related Articles
ವೆಂಕಟರಮಣಪ್ಪ ಪುತ್ರನಿಗೆ ಪೈಪೋಟಿಯಾಗಿ ಕಾಂಗ್ರೆಸ್ ಮುಖಂಡರಾದ ರಾಮ ಚಂದ್ರಪ್ಪ, ಗಾಯತ್ರಿಬಾಯಿ, ಕೋರ್ಟ್ ನರಸಪ್ಪ, ಕೃಷ್ಣನಾಯ್ಕ, ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಕೆಂಚಮಾರಯ್ಯ, ಇದರ ಜತೆಗೆ ಚಿತ್ರದುರ್ಗ ಲೋಕಸಭಾ ಮಾಜಿ ಸದಸ್ಯ ಚಂದ್ರಪ್ಪ ಹೆಸರು ಕೂಡ ಮುಂಚೂ ಣಿ ಯಲ್ಲಿದೆ. ಈ ಮಧ್ಯೆ ಮಾಜಿ ಸಚಿವ ಎಚ್. ಆಂಜ ನೇಯ ಹೆಸರೂ ಚಲಾವಣೆಗೆ ಬಂದಿದೆ. ಮಾಜಿ ಶಾಸಕ ಸೋಮ್ಲನಾಯ್ಕ ಅವರ ಪುತ್ರಿ ಕಾಂಗ್ರೆಸ್‌ನ ಗಾಯತ್ರಿ ಬಾಯಿ ಒಂದು ಬಾರಿ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಕೋರ್ಟ್ ನರಸಪ್ಪ 1999ರಲ್ಲಿ ಸರಕಾರಿ ನೌಕರರಿಗೆ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅಂದಿನಿಂದ ಪ್ರತೀ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಕೃಷ್ಣನಾಯ್ಕ, ಕೆಂಚಮಾರಯ್ಯ ಕೂಡ ಚುನಾವಣೆಯಲ್ಲಿ ನಿಲ್ಲಲು ಅರ್ಜಿ ಸಲ್ಲಿಸಿದ್ದಾರೆ. ಲೋಕಸಭಾ ಮಾಜಿ ಸದಸ್ಯ ಚಂದ್ರಪ್ಪನವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬದ ಬಗ್ಗೆ ಗೊಂದಲವಿದೆ. ಪಕ್ಷದಲ್ಲಿ ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ಬಂದು ಟಿಕೆಟ್ ಕೇಳುವ ಮುಖಂಡರ ಬಗ್ಗೆ ಕಾರ್ಯಕರ್ತರಿಗೆ, ಮುಖಂಡರಿಗೆ ಅಸಮಾಧಾನವಿದೆ.
Advertisement
ವೆಂಕಟರಮಣಪ್ಪ ಪುತ್ರ ವೆಂಕಟೇಶ್‌ಗೆ ಸಿಗುತ್ತಾ ಟಿಕೆಟ್?ಕಾಂಗ್ರೆಸ್‌ನ ಹಾಲಿ ಶಾಸಕ ವೆಂಕಟರಮಣಪ್ಪ ಈ ಬಾರಿ ಸ್ಪರ್ಧಿಸುವುದಿಲ್ಲ. ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದಿದ್ದಾರೆ. ಹೀಗಾಗಿ ತಮ್ಮ ಪುತ್ರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ವಿ.ವೆಂಕಟೇಶ್‌ಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇವರು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪಧಿ ìಸಿ 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. 2 ಸಲ ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಚ್.ವಿ.ವೆಂಕಟೇಶ್ ಅವರಿಗೆ ಪಕ್ಷದ ಹಿರಿಯ ರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಸಹಿತ ಮತ್ತಿತರ ಆಶೀರ್ವಾದವಿದೆ. ಟಿಕೆಟ್ ಗ್ಯಾರಂಟಿ ಎಂಬ ಮಾತುಗಳಿವೆ. -ರಾಸಿನೇನಿ ಸಂತೋಷ್ ಕುಮಾರ್