Advertisement

ಮಾರುಕಟ್ಟೆಗೆ ಲಗ್ಗೆ ಇಟ್ಟ ಮರಕೆಸು

09:19 AM Jul 22, 2019 | sudhir |

ಸುಳ್ಯ : ಆಷಾಢ ಮಾಸದ ತಿಂಗಳ ವಿಶೇಷ ತಿನಿಸು ಪತ್ರೊಡೆಯ ರುಚಿ ಸವಿಯದವರೇ ಇಲ್ಲ. ಆಟಿ ತಿಂಗಳು ಆರಂಭದ ಹೊತ್ತಲ್ಲೇ ಘಟ್ಟದ ಮರಕೆಸು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Advertisement

ಮೂರು ದಿನಗಳ ಹಿಂದೆ ಸುಳ್ಯ ಮಾರುಕಟ್ಟೆಗೆ ಮರಕೆಸು ಬಂದಿದ್ದು, ಕೊಡಗಿನಿಂದ ಪೂರೈಕೆಯಾಗಿದೆ. ಇವೆಲ್ಲವೂ ನಾಟಿ ಆಧರಿತ ಮರ ಕೆಸುವಾಗಿದೆ. ಕಾಡಿನಲ್ಲಿ ಪ್ರಕೃತಿದತ್ತವಾಗಿ ಮರದ ಕೊಂಬೆ, ಪೊಟರೆಗಳಲ್ಲಿ ಹುಟ್ಟುವ ಮರ ಕೆಸುವಿಗಾಗಿ ಹುಡುಕಾಟ ಆರಂಭವಾಗಿದೆ.

ಕಾಡು ಕೆಸುವಿಗೆ ಬೇಡಿಕೆ

ನಾಟಿ ಮಾಡಿದ ಮರ ಕೆಸುವಿಗಿಂತಲೂ, ಕಾಡು ಮೇಡಿನಲ್ಲಿ ಸಿಗುವ ಮರಕೆಸುವಿಗೆ ಬೇಡಿಕೆ ಹೆಚ್ಚು. ರುಚಿಯೂ ಜಾಸ್ತಿ. ಹಾಗಾಗಿ ಮಾರುಕಟ್ಟೆಗಳಲ್ಲಿ ಮರಕೆಸು ಊರಿಧ್ದೋ, ಘಟ್ಟದ್ದೂ ಎಂದು ಮೊದಲಾಗಿ ವಿಚಾರಿಸುತ್ತಾರೆ.

ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ 20ರಿಂದ 30 ರೂ. ದರ ಇತ್ತು. ಕೆಲವೆಡೆ ಎರಡು ಕಟ್ಟಿಗೆ 50 ರೂ. ಇತ್ತು. ದಿನಂಪ್ರತಿ ಇದಕ್ಕೆ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

Advertisement

ಪತ್ರೊಡೆ ಮಳೆಗಾಲದಲ್ಲಿ ಬರುವ ಸಣ್ಣಪುಟ್ಟ ರೋಗಗಳನ್ನು ದೂರ ಮಾಡುತ್ತದೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಬಡತನದ ತಿಂಗಳು ಎನ್ನುವ ಕಾರಣಕ್ಕೆ ಮರದ ಕೆಸು ಬಳಸಿದ ತಿಂಡಿಯಿಂದ ಉದರ ತುಂಬಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಪತ್ರೊಡೆಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next