Advertisement

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

04:35 PM Apr 24, 2024 | Team Udayavani |

“ಪತ್ರಕರ್ತ’ ಹೀಗೊಂದು ಶೀರ್ಷಿಕೆಯ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಕೆ.ಹೆಚ್‌. ಮೂರ್ತಿ ಕುಮಾರ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್‌ ನಡಿಯಲ್ಲಿ ರಾಧಮ್ಮ ಬಂಡವಾಳ ಹೂಡುತ್ತಿದ್ದಾರೆ.

Advertisement

“ಇದು ಒಬ್ಬ ಪತ್ರಕರ್ತನ ಜೀವನದ ಕಥೆಯಾಗಿರುತ್ತದೆ. ಎಲ್ಲಾ ಕುಟುಂಬವರ್ಗದವರು ಹಾಗೂ ರಾಜಕಾರಣಿಗಳು ಕುಳಿತು ನೋಡುವ ಸಿನಿಮಾವಾಗಿರುತ್ತದೆ’ ಎನ್ನುವುದು ನಿರ್ದೇಶಕರ ಮಾತು.

ಕಿರುತೆರೆ ಹಾಗೂ ಜಗ್ಗೇಶ್‌ ಅಭಿನಯದ ಶ್ರೀರಾಘವೇಂದ್ರ ಸ್ಟೋರ್ಸ್‌ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ಪ್ರೀತಿ ಮೀರಾಜ್ಕರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ಉಳಿದ ತಾರಾಗಣದಲ್ಲಿ ರಮೇಶ್‌ ಭಟ್‌, ಮೈಸೂರು ರಮಾನಂದ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿ.ಕೆ. ಗೋವಿಂದ ಗೌಡ ಮತ್ತು ಮಿಮಿಕ್ರಿರಾಜು. ಇವರೊಂದಿಗೆ ರವಿರಾಮ್, ಮಂಜು ಮದ್ವಿತ್‌, ಅರ್ಜುನ್‌ ಮುಂತಾದವರು ನಟಿಸುತ್ತಿದ್ದಾರೆ.

ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿರುವ ನಾಲ್ಕು ಹಾಡುಗಳಿಗೆ ಎ.ಟಿ.ರವೀಶ್‌ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಹುಲಿಯೂರು ದುರ್ಗ, ಆಗುಂಬೆ, ತೀರ್ಥಹಳ್ಳಿ, ಉಡುಪಿ, ಚಿಕ್ಕಮಗಳೂರು, ಸಕಲೇಶಪುರ ಸುಂದರ ತಾಣಗಳಲ್ಲಿ ಶೂಟಿಂಗ್‌ ನಡೆಯಲಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next