Advertisement

23 ವರ್ಷಗಳಿಂದ ಪಟ್ನಾಯಕ್‌ ಸಿಎಂ

11:46 PM Jul 22, 2023 | Team Udayavani |

ಭುವನೇಶ್ವರ: ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅವರು ಶನಿವಾರ ಎರಡನೇ ಅತೀ ದೀರ್ಘ‌ ಅವ ಧಿಯ ಮುಖ್ಯಮಂತ್ರಿ ಎಂಬ ಗೌರವಕ್ಕೆ ಪಾತ್ರರಾ ದರು. ಅವರು 23 ವರ್ಷ 4 ತಿಂಗಳು ಮತ್ತು 17 ದಿನಗಳು ಆಡಳಿತ ನಡೆಸುವ ಮೂಲಕ ಜ್ಯೋತಿ ಬಸು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Advertisement

ಸದ್ಯ ಸಿಕ್ಕಿಂನ ಪವನ್‌ ಕುಮಾರ್‌ ಚಾಮ್ಲಿಂಗ್‌ ಅವರು ಭಾರತದ ರಾಜ್ಯವೊಂದರ ದೀರ್ಘ‌ಕಾಲದ ಮುಖ್ಯ ಮಂತ್ರಿ ಯಾಗಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದು ನವೀನ್‌ ಪಟ್ನಾಯಕ್‌ ಅವರು ಆರನೇ ಬಾರಿ ಮುಖ್ಯ ಮಂತ್ರಿ ಯಾದರೆ, 2024ರ ಆಗಸ್ಟ್‌ ನಲ್ಲಿ ಅವರು ಅತ್ಯಂತ ದೀರ್ಘಾವಧಿಯ ಮುಖ್ಯ ಮಂತ್ರಿ ಎನಿಸಲಿದ್ದಾರೆ. ತಂದೆ ಬಿಜು ಪಟ್ನಾಯಕ್‌ ಅವರು 1997ರಲ್ಲಿ ನಿಧನರಾದ ಅನಂತರ ನವೀನ್‌ ಅವರು ರಾಜಕೀಯಕ್ಕೆ ಪ್ರವೇಶ ನೀಡಿ ದರು.

1997 ರಲ್ಲಿ ಆಸ್ಕ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅದೇ ವರ್ಷ ಪಕ್ಷ ಎರಡು ವಿಭಾಗವಾಗಿ, ಬಿಜು ಜನತಾದಳ ಸ್ಥಾಪನೆಯಾಯಿತು. 1998 ರಲ್ಲಿ ಕೇಂದ್ರದಲ್ಲಿ ಎನ್‌ಡಿಎಗೆ ಬೆಂಬಲ ನೀಡಿ, ಕೇಂದ್ರ ಉಕ್ಕು ಮತ್ತು ಗಣಿ ಸಚಿವ ರಾದರು. ಅನಂತರ 2000ರಲ್ಲಿ ಒಡಿಶಾ ವಿಧಾನಸಭೆಗೆ ಪ್ರವೇಶ ನೀಡಿದ ಅವರು, ಸತತವಾಗಿ ಐದು ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಆಡಳಿತ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next