Advertisement

ಅಬ್ಬರಿಸಿದ ಬೆಂಗಾಲ್ ಹುಲಿಗಳು

02:17 AM Aug 23, 2019 | Sriram |

ಚೆನ್ನೈ: ಪ್ರೊ ಕಬಡ್ಡಿ 7ನೇ ಆವೃತ್ತಿಯ ಚೆನ್ನೈ ಚರಣದ ಗುರು ವಾರದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ಬೆಂಗಾಲ್ ವಾರಿಯರ್ 35-26 ಅಂಕಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ ತಂಡದ ದಿಗ್ವಿಜಯ ಮುಂದುವರಿದಿದೆ. ಪಾಟ್ನಾ ಪೈರೇಟ್ಸ್‌ ತಂಡದ ಸೋಲಿನ ಸರಣಿಯೂ ಉದ್ದವಾಗಿದೆ.

Advertisement

ಮಣಿಂದರ್‌ ಸೂಪರ್‌
ತಾರಾ ಆಟಗಾರರನ್ನು ಒಳಗೊಂಡ ಬೆಂಗಾಲ್ ವಾರಿಯರ್ ಖ್ಯಾತಿಗೆ ತಕ್ಕ ಆಟವಾಡಿತು. ಮಣಿಂದರ್‌ ಸಿಂಗ್‌ ರೈಡಿಂಗ್‌ನಿಂದ ಗರ್ಜಿಸಿದರು. ಅವರ ಅಬ್ಬರಕ್ಕೆ ಪಾಟ್ನಾ ಪೈರೇಟ್ಸ್‌ ಕೋಟೆ ನುಚ್ಚುನೂರಾಯಿತು. ಮಣಿಂದರ್‌ 18 ಬಾರಿ ಪಾಟ್ನಾ ಕೋಟೆಗೆ ಲಗ್ಗೆ ಇಟ್ಟರು. 10 ರೈಡಿಂಗ್‌ ಪಾಯಿಂಟ್ ತಂದರು. ಇದರಲ್ಲಿ 2 ಬೋನಸ್‌ ಅಂಕವಾಗಿತ್ತು. ಉಳಿದಂತೆ ರೈಡರ್‌ ಕೆ. ಪ್ರಪಂಜನ್‌ (6 ಅಂಕ) ಕೂಡ ಗಮನ ಸೆಳೆದರು. ರಿಂಕು ನರ್ವಲ್ (5 ಅಂಕ), ಮೊಹಮ್ಮದ್‌ ನಬಿಭಕ್ಷ್ (4 ಅಂಕ) ಪ್ರಚಂಡ ಟ್ಯಾಕಲ್ ನಡೆಸಿದರು. ಟ್ಯಾಕಲ್ನಲ್ಲಿ ಜೀವಾ ಕುಮಾರ್‌ ಕೂಡ 3 ಅಂಕಗಳಿಸಿದರು.

ಪಾಟ್ನಾ ಸೋಲಿನ ಸರಣಿ
ಪಾಟ್ನಾ ಪರ ಪರ್‌ದೀಪ್‌ ನರ್ವಲ್ (12 ಅಂಕ) ಏಕಾಂಗಿಯಾಗಿ ಹೋರಾಡಿದರು. ಪಂದ್ಯದುದ್ದಕ್ಕೂ ಆಕರ್ಷಕ ಆಟ ಪ್ರದರ್ಶಿಸಿದರು. 10 ಅಂಕಗಳನ್ನು ಟಚ್ ಪಾಯಿಂಟ್ನಿಂದ, ಇನ್ನೆರಡು ಅಂಕಗಳನ್ನು ಬೋನಸ್‌ ಮೂಲಕ ತಂದುಕೊಟ್ಟರು. ಆದರೆ ಇವರ ಈ ಹೋರಾಟಕ್ಕೆ ಫ‌ಲ ಸಿಗಲಿಲ್ಲ. ಮೊಹಮ್ಮದ್‌ ಇಸ್ಮಾಯಿಲ್ (3 ಅಂಕ), ವಿಕಾಸ್‌ ಜಗ್ಲಾನ್‌ (2 ಅಂಕ), ಮೋನು (2 ಅಂಕ) ಕಳಪೆ ಆಟವಾಡಿದರು. ಕೂಟದಲ್ಲಿ ಪಾಟ್ನಾ ಕಂಡ 6ನೇ ಸೋಲು ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next