Advertisement

ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌-ತಮಿಳ್‌ ತಲೈವಾಸ್‌ ಪಂದ್ಯ ಟೈ

11:07 PM Nov 16, 2022 | Team Udayavani |

ಪುಣೆ: ಪಾಟ್ನಾ ಪೈರೇಟ್ಸ್‌ ಎದುರಿನ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಸೋಲನ್ನು ತಪ್ಪಿಸಿಕೊಂಡ ತಮಿಳ್‌ ತಲೈವಾಸ್‌ ಟೈ ಫ‌ಲಿತಾಂಶದಿಂದ ನಿಟ್ಟುಸಿರು ಬಿಟ್ಟಿದೆ. ಕೊನೆಯ ಕ್ಷಣದಲ್ಲಿ ದಿಟ್ಟ ಹೋರಾಟ ನೀಡಿದ ತಮಿಳ್‌ 33-33 ಅಂತರದಿಂದ ಪಂದ್ಯವನ್ನು ಸಮಬಲಕ್ಕೆ ತರಲು ಯಶಸ್ವಿಯಾಯಿತು.

Advertisement

ಪಾಟ್ನಾ ಪರ ರೈಡರ್‌ ಸಚಿನ್‌ ಸರ್ವಾಧಿಕ 14 ಅಂಕ ಆಲ್‌ರೌಂಡರ್‌ ರೋಹಿತ್‌ ಗುಲಿಯ 9 ಅಂಕ ಗಳಿಸಿದರೆ, ತಮಿಳ್‌ ರೈಡರ್‌ ನರೇಂದರ್‌ 16 ಅಂಕ ತಂದಿತ್ತರು. ಮತ್ತೋರ್ವ ರೈಡರ್‌ ಅಜಿಂಕ್ಯ ಪವಾರ್‌ 7 ಅಂಕ ಗಳಿಸುವಲ್ಲಿ ಯಶಸ್ವಿಯಾದರು. ಡಿಫೆಂಡರ್‌ ಸಾಹಿಲ್‌ ಗುಲಿಯಾ 4 ಅಂಕ ಗಳಿಸಿದರು.

ಯೋಧಾಸ್‌ ಭರ್ಜರಿ ಜಯ: ದ್ವಿತೀಯ ಪಂದ್ಯದಲ್ಲಿ ಯೋಧಾಸ್‌ 50-31 ಅಂಕಗಳ ಭಾರೀ ಅಂತರದಿಂದ ಡೆಲ್ಲಿಯನ್ನು ಕೆಡವಿತು. ಯೋಧಾಸ್‌ ರೈಡರ್‌ ಪದೀಪ್‌ ನರ್ವಾಲ್‌ 22 ಅಂಕಗಳೊಂದಿಗೆ aಮಿಂಚಿದರು. ಡೆಲ್ಲಿ ಆಲ್‌ರೌಂಡರ್‌ ವಿಜಯ್‌ ಮಲಿಕ್‌ 13 ಅಂಕ ಗಳಿಸಿ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next