Advertisement

ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು!

11:57 AM Dec 18, 2020 | keerthan |

ಚಿಕ್ಕಮಗಳೂರು: ಪತಿಯ ನಿಧನದ ಸುದ್ದಿ ಕೇಳಿ ಪತ್ನಿಯೂ ಸಾವನ್ನಪ್ಪಿದ ಘಟನೆ  ತಾಲೂಕಿನ ಗಾಳಿಗಳ್ಳಿಯಲ್ಲಿ ನಡೆದಿದೆ.

Advertisement

ದೊಡ್ಡರಾಜಣ್ಣ (80), ಹಾಗೂ ರುದ್ರಮ್ಮ (74) ಮೃತ ದುರ್ದೈವಿಗಳು. ಪತಿ ರಾಜಣ್ಣ ಅವರು ಕಳೆದ ಎರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇದನ್ನೂ ಓದಿ:ಆಲಮೇಲ: ಎರಡು ದೇವಸ್ಥಾನ ಮತ್ತು ಏಳು ಮನೆಗಳಲ್ಲಿ ಕಳ್ಳತನ, ಜನರಲ್ಲಿ ಹೆಚ್ಚಿದ ಆತಂಕ

ವಾರದ ಹಿಂದೆ ಪತ್ನಿ ರುದ್ರಮ್ಮಾ ಅವರಿಗೆ ಪಾರ್ಶ್ವವಾಯು ಆಗಿತ್ತು. ಗುರುವಾರ ರಾಜಣ್ಣ ಅವರನ್ನು ಆಸ್ಪತ್ರೆಗೆ ಕರೆತಂದಾಗ ಸಾವನ್ನಪ್ಪಿದ್ದರು. ಗಂಡನ ಮೃತದೇಹ ಮನೆಗೆ ಬರುವಷ್ಟರಲ್ಲಿ ಪತ್ನಿ ರುದ್ರಮ್ಮ ಸಾವನ್ನಪ್ಪಿದ್ದರು.

ಮೃತಪಟ್ಟ ಪತಿ ಪತ್ನಿಯ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next