ಪಠಾಣ್‌ಕೋಟ್( ಪಂಜಾಬ್) : ಇಲ್ಲಿನ ರೈಲು ನಿಲ್ದಾಣಗಳು, ವಾಹನಗಳ ಮೇಲೆ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರು ‘ಕಾಣೆಯಾಗಿದ್ದಾರೆ’ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.
ಪ್ರತಿಭಟನಾನಿರತ ಸ್ಥಳೀಯರೊಬ್ಬರು ಎಎನ್‌ಐ ಜೊತೆ ಮಾತನಾಡಿ, “ಸಂಸದರಾದ ನಂತರ ಅವರು ಗುರುದಾಸ್‌ಪುರಕ್ಕೆ ಭೇಟಿ ನೀಡಲಿಲ್ಲ, ಅವರು ತಮ್ಮನ್ನು ಪಂಜಾಬ್‌ನ ಮಗ ಎಂದು ಕರೆದುಕೊಳ್ಳುತ್ತಾರೆ ಆದರೆ ಅವರು ಯಾವುದೇ ಕೈಗಾರಿಕಾ ಅಭಿವೃದ್ಧಿಯನ್ನು ತಂದಿಲ್ಲ, ಸಂಸದರ ನಿಧಿಯನ್ನು ಮಂಜೂರು ಮಾಡಿಲ್ಲ ಅಥವಾ ಕೇಂದ್ರ ಸರಕಾರದ ಯಾವುದೇ ಯೋಜನೆಯನ್ನು ಇಲ್ಲಿಗೆ ತಂದಿಲ್ಲ. ಅವರು ಕೆಲಸ ಮಾಡಲು ಬಯಸದಿದ್ದರೆ, ಅವರು ರಾಜೀನಾಮೆ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾನಿ
“ಕೆಲವು ವಾರಗಳ ಹಿಂದೆ ಚಿತ್ರೀಕರಣದ ವೇಳೆ ಸನ್ನಿ ಡಿಯೋಲ್ ಬೆನ್ನುನೋವಿಗೆ ತುತ್ತಾಗಿದ್ದರು, ಅವರು ಮೊದಲು ಮುಂಬೈನಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು ಮತ್ತು ನಂತರ ಅವರು ಎರಡು ವಾರಗಳ ಹಿಂದೆ ಬೆನ್ನು ಚಿಕಿತ್ಸೆಗಾಗಿ ಯುಎಸ್ಎಗೆ ತೆರಳಿದ್ದಾರೆ. ರಾಷ್ಟ್ರಪತಿ ಚುನಾವಣೆ ವೇಳೆಯೂ ಅವರು ಇರಲಿಲ್ಲ. ಅವರ ಚಿಕಿತ್ಸೆ ಇನ್ನೂ ಮುಗಿದಿಲ್ಲ, ಅವರು ಚೇತರಿಸಿಕೊಂಡ ನಂತರ ಭಾರತಕ್ಕೆ ಮರಳುತ್ತಾರೆ ಎಂದು ತಿಳಿದು ಬಂದಿದೆ.
ಡಿಯೋಲ್ ಬಿಜೆಪಿ ಸೇರಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್‌ಪುರ ಕ್ಷೇತ್ರದಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುನಿಲ್ ಜಾಖರ್ ವಿರುದ್ಧ 82,459 ಮತಗಳ ಅಂತರದಿಂದ ಗೆದ್ದಿದ್ದರು.