Advertisement

ಪಟೇಲ್‌-ನೆಹರೂ ಅಖಂಡ ಭಾರತ ಕಟ್ಟಿದ ಧೀಮಂತರು

11:57 AM Sep 18, 2018 | Team Udayavani |

ಬಸವಕಲ್ಯಾಣ: ಹರಿದು ಹಂಚಿ ಹೋಗಿದ್ದ ದೇಶವನ್ನು ಅಖಂಡ ಭಾರತ ಮಾಡಿದ ಕೀರ್ತಿ ಪಂಡಿತ ಜವಹಾರಲಾಲ್‌ ನೆಹರು ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ನಾರಾಣಯಣರಾವ್‌ ಹೇಳಿದರು. ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ನಡೆದ ಹೈ.ಕ. ವಿಮೋಚನಾ ದಿನಾಚರಣೆ ಮತ್ತು ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಗೋರ್ಟಾ (ಬಿ) ಮತ್ತು ಮುಚಳಂಬ ಗ್ರಾಮಗಳು ಹೈ.ಕ. ವಿಮೋಚನೆಯ ಕೇಂದ್ರಬಿಂದುವಾಗಿವೆ. ದೇಶಕ್ಕೆ ಸ್ವಾತಂತ್ರ್ಯಾ
ಸಿಕ್ಕು 13 ತಿಂಗಳ ನಂತರ ಈ ಭಾಗಕ್ಕೆ ಸ್ವಾತಂತ್ರ್ಯಾ ಸಿಕ್ಕಿದೆ. ಆದ್ದರಿಂದ ಹುತಾತ್ಮರ ನೆನಪಿಗಾಗಿ ವಿಮೋಚನಾ ದಿನ
ಆಚರಿಸಲಾಗುತ್ತಿದೆ. ಆಂಧ್ರ ಮತ್ತು ಮಹಾರಾಷ್ಟ್ರದ ಕೆಲ ಭಾಗಗಳೂ ನಿಜಾಮನ ಕೈವಶದಲ್ಲಿದ್ದವು. ಅವರೂ ಇಂದೇ ಮುಕ್ತಿ ಪಡೆದಿವೆ ಎಂದು ಹೇಳಿದರು.

ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಉದ್ಯೋಗದ ದೃಷ್ಟಿಯಿಂದ 371 (ಜೆ) ಕಾಯ್ದೆ ಜಾರಿಗೆ ಮಾಡುವಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌.ಧರಂಸಿಂಗ್‌ ಅವರು ಪ್ರಮುಖ ಕಾರಣೀಕರ್ತರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ವಿಶ್ವಕರ್ಮ ಸಮಾಜ ಇಲ್ಲದಿದ್ದರೆ ಸಮಾಜದಲ್ಲಿ ಯಾವುದೇ ದೇವಸ್ಥಾನವಾಗಲಿ ಅಥವಾ ಕೃಷಿ ಚಟುವಟಿಕೆ ಮಾಡಲು ಬೇಕಾದ ಸಾಮಾಗ್ರಿಗಳು ಕೂಡ ಇರುತ್ತಿರಲಿಲ್ಲ. ಆದ್ದರಿಂದ ವಿಶ್ವಕರ್ಮ ಸಮಾಜ ತನ್ನದೆ ಆದ ಮಹತ್ವ ಹೊಂದಿದೆ ಎಂದು ಹೇಳಿದರು.  ಬಸವಕಲ್ಯಾಣ ಸಹಾಯಕ ಆಯುಕ್ತ ಶರಣಬಸಪ್ಪಾ ಕೋಟೆಪ್ಪಗೋಳ, ನಗರಸಭೆ ಅಧ್ಯಕ್ಷ ಮಿರ್‌ ಅಜರ್‌ಅಲಿ ನೌರಂಗ ಮಾತನಾಡಿದರು. ರಮೇಶ ಜಿಣಜಗಿ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ, ತಹಶೀಲ್ದಾರ ಜಗನ್ನಾಥರೆಡ್ಡಿ, ನಗರಸಭೆ ಆಯುಕ್ತ ಸುರೇಶ ಬಬಲಾದ್‌, ಇಒ ಮಡಿವಾಳಪ್ಪಾ ಪಿ.ಎಸ್‌. ಸೇರಿದಂತೆ ಮತ್ತಿತರರು ಇದ್ದರು. 

ವಿಶ್ವಕರ್ಮ ಭಾವಚಿತ್ರ ಮೆರವಣಿಗೆ: ವಿಶ್ವಕರ್ಮ ಜಯಂತಿ ಅಂಗವಾಗಿ ಸಮಾಜದಿಂದ ನಗರದಲ್ಲಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ನಡೆಯಿತು. ನಗರದ ಕೋಟೆಯಿಂದ ಆರಂಭವಾಗಿ ಹಳೆ ತಹಶೀಲ್ದಾರ ಕಚೇರಿ ತಲುಪಿ ಮುಕ್ತಾಯವಾಯಿತು. ಶಾಸಕ ಬಿ.ನಾರಾಯಣರಾವ್‌, ನಗರಸಭೆ ಅಧ್ಯಕ್ಷ ಮಿರ್‌ ಅಜರ್‌ಅಲಿ ನೌರಂಗ, ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ, ತಹಶೀಲ್ದಾರ್‌ ಜಗನ್ನಾಥರೆಡ್ಡಿ, ಉಪ ತಹಶೀಲ್ದಾರ್‌ ಶಿವಾನಂದ ಮೇತ್ರೆ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next