Advertisement
ಕಳೆದ 2022 ರಿಂದ 2023ರ ಜುಲೆ„-14ರ ತನಕ ಒಟ್ಟು 11ಬಾರಿ ಸಿಒಗಳು ಇಲ್ಲಿನ ಪಪಂಗೆ ವರ್ಗಾವಣೆಗೊಂಡು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬೆಳವಣಿಗೆ ಪಟ್ಟಣದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಅರಕಲಗೂಡು ಪಪಂನ ಮುಖ್ಯಾಧಿಕಾರಿ ಹುದ್ದೆಗೆ 2017ರಿಂದಲೂ ಜಟಾಪಟಿಯಿಂದ ನಡೆಯುತ್ತಿದೆ. ವರ್ಗಾವಣೆ ಭೂತಕ್ಕೆ ಸಿಲುಕಿ ಇಲ್ಲಿಗೆ ಬರುವ ಮುಖ್ಯಾಧಿಕಾರಿಗಳು ಪದೇಪದೆ ವರ್ಗಾವಣೆ ಆಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
Related Articles
Advertisement
ಇದೇ ಶಿವಕುಮಾರ್ ಅವರು 2023ರ ಜೂ.30ರಂದು ಮತ್ತೂಮ್ಮೆ ವರ್ಗಾವಣೆಗೊಳ್ಳುತ್ತಾರೆ. ಈ ಅವಧಿಯಲ್ಲಿ ಪ್ರಥಮ ದರ್ಜೆ ಸಹಾಯಕಿ ಸವಿತಾ ಅವರು ಪ್ರಭಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಕೇವಲ 2 ದಿನಗಳಲ್ಲೆ ಮತ್ತೆ ಬಸವರಾಜ ಟಾಕಪ್ಪ ಶಿಗ್ಗಾವಿ ಅವರು ಜು.3ರಂದು ಸಿಒ ಹುದ್ದೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡಿ 5 ದಿನ ಕಾರ್ಯ ನಿರ್ವಹಿಸುತ್ತಾರೆ. 2023ರ ಜು.3ರಂದೇ ಲಿಂಗರಾಜು ಅವರು ಸಿಒ ಹುದ್ದೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕಾರ ಮಾಡುತ್ತಾರೆ. ಇಲ್ಲಿಗೆ ಮುಗಿಯುವುದಿಲ್ಲ. ಮತ್ತೆ 2023ರ ಜು.14ರಂದು ಬಸವರಾಜ ಟಾಕಪ್ಪ ಶಿಗ್ಗಾವಿ ಅವರು ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.
ವ್ಯಾಪಕ ಟೀಕೆ: ಅರಕಲಗೂಡು ಪಪಂ ಹೊರತುಪಡಿಸಿದರೇ, ಜಿಲ್ಲೆಯ ಯಾವುದೇ ನಗರಸಭೆ, ಪುರಸಭೆ, ಪಪಂ ಅಧಿಕಾರಿಗಳು, ಮುಖ್ಯಾಧಿಕಾರಿ ಹುದ್ದೆಗೆ ಇಷ್ಟೊಂದು ನಿರಂತರವಾಗಿ ವರ್ಗಾವಣೆ ನಡೆದಿಲ್ಲ. ಆದರೆ ಇಲ್ಲಿನ ಪಪಂ ಸಿಒ ಹುದ್ದೆಗೆ ಪದೇಪದೆ ವರ್ಗಾವಣೆಗೊಳ್ಳುತ್ತಿರುವ ಅಧಿಕಾರಿಗಳ ನಡೆ ಬಗ್ಗೆ ಆ ಹುದ್ದೆಯಲ್ಲಿನ ವಿಶೇಷತೆ ಏನು..? ಲಾಭದಾಯ ಹುದ್ದೆನಾ? ಎಂಬ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಷ್ಟೊಂದು ಮಂದಿ ಸಿಒಗಳ ಅಧಿಕಾರ ವಹಿಸಿಕೊಂಡು ಸೇವೆ ಸಲ್ಲಿಸಿದ್ದರೂ ಕೂಡ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಿದ್ದರೂ ಕೂಡ ಇಲ್ಲಿ ಅಧಿಕಾರ ಅನುಭವಿಸಿದವರೇ ತಮ್ಮ ರಾಜಕೀಯ ಬಲ ಬಳಸಿ ಇಲ್ಲಿಗೆ ಬರುತ್ತಿರುವ ಹಿನ್ನೆಲೆ ತುಂಬಾ ಗಂಭೀರವಾಗಿ ಪರಿಗಣಿಸಬೇಕಿದೆ.
ಹುದ್ದೆಯಿಂದ ಆಗುತ್ತಿರುವ ಲಾಭ ಕುರಿತು, ಮೇಲಾಧಿಕಾರಿಗಳು, ಶಾಸಕರು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ಸಿಒ ಹುದ್ದೆಯಿಂದ ಜನತೆಗೆ ಆಗುತ್ತಿರುವ ಗೊಂದಲ ಹಾಗೂ ಅಭಿವೃದ್ಧಿ ಹಿನ್ನಡೆಯಾಗಿದೆ. ಆಡಳಿತ ಸದಸ್ಯರು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಮಟ್ಟಿಗೆ ಈ ವರ್ಗಾವಣೆ ಲಾಬಿಯನ್ನು ಕೊಂಡಯಬೇಕು. ಆ ಮೂಲಕ ಹುದ್ದೆಯನ್ನು ಘನೆತೆಯನ್ನು ಕಾಪಾಡಬೇಕು. ● ಶಶಿ ಕುಮಾರ್, ಜೆಡಿಎಸ್ ಯುವ ಮುಖಂಡ
ಅರಕಲಗೂಡು ಪಪಂನ ಮುಖ್ಯಾಧಿಕಾರಿ ಹುದ್ದೆ ವರ್ಗಾವಣೆ ಮಕ್ಕಳ ಆಟಿಕೆಯಾಗಿ ದೆ. ಈ ಹುದ್ದೆಗೆ ಬಂದವರೇ ಪದೇಪದೆ ಪ್ರಭಾ ವ ಬಳಸಿ ಬರುತ್ತಿದ್ದಾರೆ. ಇದರ ಉದ್ದೇಶ, ಅಧಿಕಾರದ ಹಿನ್ನೆಲೆ, ಹಾಗೂ ಹುದ್ದೆಯಿಂದ ಆಗುತ್ತಿರುವ ಲಾಭ ಕುರಿತು ಮೇಲಾಧಿಕಾರಿ ಕ್ಷೇತ್ರದ ಶಾಸಕರು ಗಮನ ಕೊಡಬೇಕಿದೆ. ಹುದ್ದೆ ಹಿಂದೆ ರಾಜಕೀಯ ಪ್ರತಿಷ್ಠೆ ಜತೆಗೆ ಅಧಿಕಾರದ ವ್ಯಾಮೋಹಗಳ ಗೊಂದಲಕ್ಕೆ ಸರಕಾರ ತೆರೆ ಎಳೆಯಬೇಕಿದೆ. ● ಕೃಷ್ಣಯ್ಯ, ಹಿರಿಯ ಸದಸ್ಯ, ಪಪಂ ಅರಕಲಗೂಡು.
-ವಿಜಯ್ ಕುಮಾರ್, ಅರಕಲಗೂಡು