Advertisement

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

11:17 PM May 15, 2021 | Team Udayavani |

ಹೊಸದಿಲ್ಲಿ: ಕೊರೊನಾ ಸಮಸ್ಯೆ ಎದುರಿಸುತ್ತಿರುವವರಿಗೆ ಟೀಮ್‌ ಇಂಡಿಯಾದ ಮಾಜಿ ಆಲ್‌ರೌಂಡರ್‌ಗಳಾದ ಇರ್ಫಾನ್‌ ಪಠಾಣ್‌ ಮತ್ತು ಯೂಸುಫ್ ಪಠಾಣ್‌ ಮತ್ತೂಂದು ಸುತ್ತಿನ ನೆರವು ಘೋಷಿಸಿದ್ದಾರೆ.

Advertisement

ಈಗಾಗಲೇ ಬಡ ಜನರಿಗೆ ಆಹಾರ, ಔಷಧ ಕಿಟ್‌ಗಳನ್ನು ವಿತರಿಸುವ ಮೂಲಕ ನೆರವು ನೀಡಿದ್ದ ಪಠಾಣ್‌ ಸಹೋದರರು ಇದೀಗ ಸಾಮಾಜಿಕ ಜಾಲತಾಣಗಳ ಪ್ರಚಾರದಲ್ಲಿ ಬಂದ ಎಲ್ಲ ಹಣವನ್ನು ಚಾರಿಟಿ ಸಂಸ್ಥೆಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿವೆ.
**
ಆಕ್ಸಿಜನ್‌ ನೆರವು ಒದಗಿಸಿದ ಧವನ್‌
ಹೊಸದಿಲ್ಲಿ: ಕೊರೊನಾ ದ್ವಿತೀಯ ಅಲೆಯ ವಿರುದ್ಧ ಹೋರಾಟ ನಡೆಸುತ್ತಿರುವ ಗುರುಗ್ರಾಮದ ಪೊಲೀಸರಿಗೆ ಕ್ರಿಕೆಟಿಗ ಶಿಖರ್‌ ಧವನ್‌ 25 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದಕ್ಕಾಗಿ ಗುರುಗ್ರಾಮದ ಪೊಲೀಸರು ಧವನ್‌ಗೆ ಕೃತಜ್ಞತೆ ಸಲ್ಲಿದ್ದಾರೆ.

ಇದನ್ನೂ ಓದಿ :ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

“ಈ ಸಾಂಕ್ರಾಮಿಕ ಸಂದರ್ಭದಲ್ಲಿ ಜನರ ಹಾಗೂ ಸಮಾಜ ಸೇವೆಗೆ ನಿಲ್ಲಬೇಕಾದುದು ನಮ್ಮ ಕರ್ತವ್ಯ. ಇದು ನನ್ನ ಪಾಲಿನ ಸಣ್ಣ ಸಹಾಯ. ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಖಂಡಿತವಾಗಿ ಜಯಶಾಲಿಯಾಗಲಿದೆ. ಮತ್ತೆ ಮಿನುಗಲಿದೆ…’ ಎಂಬುದಾಗಿ ಶಿಖರ್‌ ಧವನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next