ಹೊಸದಿಲ್ಲಿ: ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಸೋಲನುಭವಿಸಿದ ಕೂಡಲೇ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರು ತವರಿಗೆ ತೆರಳಿದ್ದಾರೆ. ತುರ್ತು ಕೌಟುಂಬಿಕ ಕಾರಣದಿಂದ ಅವರು ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 1ರಂದು ಮೂರನೇ ಟೆಸ್ಟ್ ಪಂದ್ಯವು ಇಂಧೋರ್ ನಲ್ಲಿ ಆರಂಭವಾಗಲಿದ್ದು, ಅದಕ್ಕೂ ಮೊದಲು ಅವರು ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ವಿವಾಹಕ್ಕೆ ನಿರಾಕರಿಸಿದ ಅಪ್ರಾಪ್ತೆಗೆ ಹಲ್ಲೆ: ಜುಟ್ಟು ಹಿಡಿದು ಎಳೆದೊಯ್ದ 47 ವರ್ಷದ ವ್ಯಕ್ತಿ
ಹೊಸದಿಲ್ಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಅಂತ್ಯವಾಗಿದೆ. ದಿಲ್ಲಿ ಪಂದ್ಯವನ್ನು ಏಳು ವಿಕೆಟ್ ಅಂತರದಿಂದ ಗೆದ್ದ ರೋಹಿತ್ ಪಡೆ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು.
ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾವು ಉಪಖಂಡದಲ್ಲಿ ನಡೆಯುತ್ತಿರುವ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ನಾಗ್ಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲೂ ಮೂರೇ ದಿನಕ್ಕೆ ಆಸೀಸ್ ಸೋಲನುಭವಿಸಿತ್ತು.
ಸರಣಿಯಲ್ಲಿ ಭಾರತವನ್ನು ಕ್ಲೀನ್ ಸ್ವೀಪ್ ಮಾಡಿದರೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಿಂದ ಹೊರಬೀಳುವ ಭೀತಿಯಲ್ಲಿದೆ.