Advertisement

ಕಮಿನ್ಸ್ ಕ್ಯಾಮಿಯೋಗೆ ಕಂಗಾಲಾದ ಮುಂಬೈ: ಬ್ಯಾಟಿಂಗ್ ನಲ್ಲಿ ದಾಖಲೆ ಬರೆದ ಪ್ಯಾಟ್

08:48 AM Apr 07, 2022 | Team Udayavani |

ಪುಣೆ: ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಕೊನೆಯ ಐದು ಓವರ್ ಗಳಲ್ಲಿ 35 ರನ್ ಅಗತ್ಯವಿತ್ತು. ಗುರಿ ಸುಲಭವಿತ್ತು. ಆದರೆ ವಿಕೆಟ್ ಐದು ನಷ್ಟವಾಗಿತ್ತು. ವೆಂಕಟೇಶ್ ಅಯ್ಯರ್ ಹೊರತುಪಡಿಸಿ ಪೂರ್ಣಪ್ರಮಾಣದ ಬ್ಯಾಟರ್ ಕ್ರೀಸ್ ನಲ್ಲಿ ಇರಲಿಲ್ಲ. ಅಷ್ಟರಲ್ಲಿ ಕ್ರೀಸ್ ಗೆ ಬಂದ ಪ್ಯಾಟ್ ಕಮಿನ್ಸ್ ಎಲ್ಲಾ ಲೆಕ್ಕಾಚಾರ ತಲೆಕೆಳಗು ಮಾಡಿದರು. ಕೇವಲ ಒಂದೇ ಓವರ್ ನಲ್ಲಿ ಎಲ್ಲಾ 35 ರನ್ ಬಾರಿಸಿ ಕೆಕೆಆರ್ ಗೆ ಜಯ ತಂದಿತ್ತರು.

Advertisement

ಬ್ಯಾಟಿಂಗ್ ಸುಲಭವಾಗಿರದ ಪಿಚ್ ನಲ್ಲಿ ಮನಸೋ ಇಚ್ಛೆ ಬ್ಯಾಟ್ ಬೀಸಿದ ಪ್ಯಾಟ್ ಕೇವಲ 15 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿದರು. ಆರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಕಮಿನ್ಸ್ ಬ್ಯಾಟ್ ನಿಂದ ಸಿಡಿದಿತ್ತು.

ಡೇನಿಯಲ್ ಸ್ಯಾಮ್ಸ್ ಎಸೆದ 16ನೇ ಓವರ್ ನಲ್ಲಿ ಕಮಿನ್ಸ್ 35 ರನ್ ಚಚ್ಚಿದರು. 6,4,6,6,ನೋ ಬಾಲ್ 2ರನ್, 4, 6 ಇದು ಸ್ಯಾಮ್ಸ್ ಓವರ್ ನಲ್ಲಿ ಕಮಿನ್ಸ್ ಬಾರಿಸಿದ ರನ್ ಗಳು. ಇದೇ ವೇಳೆ ಕೇವಲ 14 ಎಸೆತದಲ್ಲಿ ಅರ್ಧಶತಕ ಪೂರೈಸಿ ಐಪಿಎಲ್ ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರ ಸ್ಥಾನ ಅಲಂಕರಿಸಿದರು. ( ಕೆಎಲ್ ರಾಹುಲ್ ಕೂಡಾ 14 ಎಸೆತದಲ್ಲಿ ಅರ್ಧಶತಕ ಗಳಿಸಿದ್ದರು)

ಇದನ್ನೂ ಓದಿ:ದಿನೇಶ್‌ ಕಾರ್ತಿಕ್‌ ಆಟ ಶ್ರೇಷ್ಠ: ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌

ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ ಇಂಡಿಯ್ಸ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೆರವಿನಿಂದ 161 ರನ್ ಗಳಿಸಿತ್ತು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿಯ ಕೂಟದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಸೋಲನುಭವಿಸಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದ ಕೆಕೆಆರ್ ಅಗ್ರಸ್ಥಾನ ಅಲಂಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next