Advertisement

2ರಂದು ಪಾಸ್ಟಿಕ್‌ ಸಂಗ್ರಹಣಾ ಅಭಿಯಾನ

09:41 AM Sep 21, 2019 | Suhan S |

ಹುಬ್ಬಳ್ಳಿ: ಮಹಾತ್ಮಾ ಗಾಂಧೀಜಿ ಜನ್ಮದಿನಾಚರಣೆ ಅಂಗವಾಗಿ ಅ. 2ರಂದು ಹು-ಧಾ ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ ಹಾಗೂ ಹಲವು ಸಂಸ್ಥೆಗಳ ಸಹಯೋಗದಲ್ಲಿ ಬೃಹತ್‌ ಪ್ಲಾಸ್ಟಿಕ್‌ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

Advertisement

ನಗರದ 412 ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಳ್ಳುವರು. ವಿದ್ಯಾರ್ಥಿಗಳು ಒಟ್ಟುಗೂಡಿಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸಲು ಪಾಲಿಕೆ ವತಿಯಿಂದ 49 ಘಟಕಗಳನ್ನು ತೆರೆಯಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಗೋಣಿ ಚೀಲಗಳನ್ನು ಪಾಲಿಕೆಯಿಂದ ವಿತರಿಸಲಾಗುವುದು. ಸಂಗ್ರಹಿಸಿದ ವಸ್ತುಗಳನ್ನು ಪಾಲಿಕೆಯಿಂದ ವಿಲೇವಾರಿ ಮಾಡಲಾಗುವುದು. ಬೃಹತ್‌ ಮಟ್ಟದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸುವ ಅಭಿಯಾನದ ಕುರಿತು ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೇರಿದಂತೆ ಇತರೆ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ಪರಿಸರ ಅಭಿಯಂತರು ಸೇರಿ ರೂಪುರೇಷೆ ಸಿದ್ಧಪಡಿಸಲಾಗಿದೆ.

ಸ್ವತ್ಛತಾ ಹಿ ಸೇವಾ ಹಾಗೂ ಪ್ಲಾಸ್ಟಿಕ್‌ ಬಳಕೆಯನ್ನು ತಡೆಯುವ ನಿಟ್ಟಿಲ್ಲಿ ಅಭಿಯಾನ ಆಯೋಜಿಸಲಾಗಿದೆ. ಜನರಲ್ಲೂ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಹಲವು ಹವ್ಯಾಸ ತಂಡಗಳು, ಸಂಘ-ಸಂಸ್ಥೆಗಳು ಅಭಿಯಾನದಲ್ಲಿ ಕೈ ಜೋಡಿಸಿವೆ. ನಗರದಿಂದ ಹಾನಿಕಾರಕ ಪ್ಲಾಸ್ಟಿಕ್‌ ಹೊರ ಹೋಗುವವರೆಗೂ ಅಭಿಯಾನ ನಡೆಯಲಿದೆ. ಅ. 2ರಂದು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಕಸ ಸಂಗ್ರಹ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next