Advertisement

Passport: ಅಕ್ರಮ- 24 ಮಂದಿ ವಿರುದ್ಧ ಕೇಸು

10:29 PM Oct 14, 2023 | Team Udayavani |

ಕೋಲ್ಕತಾ: ನಕಲಿ ದಾಖಲೆಗಳ ಆಧಾರದಲ್ಲಿ ಪಾಸ್‌ಪೋರ್ಟ್‌ಗಳನ್ನು ವಿತರಿಸಿದ ಆರೋಪದಲ್ಲಿ ಪಶಿÒಮ ಬಂಗಾಳ ಮತ್ತು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನ 50 ಸ್ಥಳಗಳಲ್ಲಿ ಶನಿವಾರ ಸಿಬಿಐ ದಾಳಿ ನಡೆಸಿದೆ.

Advertisement

ಜತೆಗೆ ಸರ್ಕಾರಿ ಅಧಿಕಾರಿಗಳು ಸೇರಿದಂತೆ 24 ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ. ಜತೆಗೆ ಗ್ಯಾಂಗ್ಟಕ್‌ನಲ್ಲಿ ಒಬ್ಬ ಸರ್ಕಾರಿ ಅಧಿಕಾರಿ ಹಾಗೂ ಮಧ್ಯವರ್ತಿಯೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೊಂದೆಡೆ, ಕೋಲ್ಕತಾದ ಪಾಸ್‌ಪೋರ್ಟ್‌ ಕಚೇರಿ ಹಾಗೂ ಸಾಲ್ಟ್ ಲೇಕ್‌ ಮತ್ತು ಹೌರಾದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಪಾಸ್‌ಪೋರ್ಟ್‌ ಕಚೇರಿ ಉದ್ಯೋಗಿಯ ಮನೆ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಹಲವು ಗಂಟೆಗಳ ವಿಚಾರಣೆ ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next