ಅಲಾಸ್ಕಾ : ವಿಮಾನದ ಎರಡೂ ಶೌಚಾಲಯಗಳಲ್ಲಿ ಪ್ರಯಾಣಿಕನೋರ್ವ ಎಲ್ಲೆಡೆ ಚೆಲ್ಲುವ ರೀತಿಯಲ್ಲಿ ಯದ್ವಾತದ್ವಾ ಮಲ ವಿಸರ್ಜಿಸಿದ ಪರಿಣಾಮವಾಗಿ ಯುನೈಟೆಡ್ ಏರ್ ಲೈನ್ಸ್‌ನ ಶಿಕಾಗೋ – ಹಾಂಕಾಂಗ್ ಹಾರಾಟದ ವಿಮಾನ ತುರ್ತು ಸ್ವಚ್ಚತಾ ನಿರ್ವಹಣೆಗಾಗಿ ಅನಿಗದಿತ ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆಗೆ ಗುರಿಯಾಯಿತು.
ವರದಿಗಳ ಪ್ರಕಾರ ವಿಮಾನದ ಎರಡೂ ಶೌಚಾಲಯಗಳಲ್ಲಿ ಯದ್ವಾತದ್ವಾ ಮಲ ವಿಸರ್ಜನೆ ಮಾಡಿದ್ದ ಪ್ರಯಾಣಿಕನು ತನ್ನ ಶರ್ಟನ್ನು ಕೂಡ ಕಳಚಿ ಅದನ್ನು ಟಾಯ್‌ಲೆಟ್ ಒಳಗೆ ತುರುಕಲು ಯತ್ನಿಸಿದ್ದ.
ಶೌಚಾಲಯಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸುವ ಸಲುವಾಗಿ ವಿಮಾನವನ್ನು ಅನಿಗದಿತವಾಗಿ ಲ್ಯಾಂಡಿಂಗ್ ಮಾಡಲಾಯಿತಲ್ಲದೆ “ಅನಿಗದಿತ ಹಾರಾಟ ಕೈಗೊಳ್ಳಲಾಗದ’ ಕಾರಣಕ್ಕೆ ಅದರ ಹಾರಾಟವನ್ನೇ ರದ್ದು ಗೊಳಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಬೋಯಿಂಗ್ 777 ವಿಮಾನದ ಎರಡೂ ಶೌಚಾಲಯಗಳನ್ನು ಈ ರೀತಿ ಕೊಳಕು ಮಾಡಿದ ಪ್ರಯಾಣಿಕನನ್ನು FBI ಏಜಂಟರು ಮತ್ತು ಅಲಾಸ್ಕಾ ಟೆಡ್ ಸ್ಟೀವನ್ಸ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಪೊಲೀಸರು ವಿಮಾನ ಲ್ಯಾಂಡಿಂಗ್ ಆಡದೊಡನೆಯೇ ಪ್ರಶ್ನಿಸಿದರು. ಪ್ರಯಾಣಿಕನು ಪೊಲೀಸರ ತನಿಖೆಗೆ ಸಹಕರಿಸಿರುವುದಾಗಿ ವರದಿಗಳು ತಿಳಿಸಿವೆ.
ವಿಮಾನವನ್ನು ಆ್ಯಂಕರೇಜ್‌ಗೆ ಮಾರ್ಗ ಬದಲಾಯಿಸುವ ಮುನ್ನ ಆ ಪ್ರಯಾಣಿಕನು ವಿಮಾನದ ಎರಡೂ ಶೌಚಾಲಯಗಳಲ್ಲಿ ಮಲ ಹರಡಿಕೊಳ್ಳುವಂತೆ ವಿಸರ್ಜಿಸಿದ್ದ ಎಂದು ಏರ್‌ಪೋರ್ಟ್ ಪೊಲೀಸ್ ಲೆ| ಜೋ ಗೆಮಾಶೆ ತಿಳಿಸಿದ್ದಾರೆ.
“ಆತನನ್ನು ನಾವು ಬಂಧಿಸಿಲ್ಲ; ಆದರೆ ಆತನ ಮನೋ ಸ್ವಾಸ್ಥ್ಯವನ್ನು ತಿಳಿಯಲು ಆತನನ್ನು ಪ್ರಾವಿಡೆನ್ಸ್ ಆಸ್ಪತ್ರೆಗೆ ಕಳುಹಿಸಿದ್ದೇವೆ. ಅಲಾಸ್ಕಾದಲ್ಲಿ ಪೊಲೀಸ್ ಅಧಿಕಾರಿಗಳು ವಿಮಾನದಲ್ಲಿ ಆ ವ್ಯಕ್ತಿಯನ್ನು ಭೇಟಿಯಾದಾಗ ಆತ ಶರ್ಟ್ ಧರಿಸಿರಲಿಲ್ಲ ಎಂದವರು ಹೇಳಿದ್ದಾರೆ.
ವ್ಯಕ್ತಿಯ ಬಲಿ ವಿಯೆಟ್ನಾಮ್ ಪಾಸ್ ಪೋರ್ಟ್ ಇದ್ದು ಆತ ಅಮೆರಿಕದ ಶಾಶ್ವತ ವಾಸ್ತವ್ಯದ ಕಾರ್ಡ್ ಹೊಂದಿದ್ದಾನೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಆತ ಅಸಂಬದ್ಧ ಉತ್ತರ ನೀಡಿದ್ದಾನೆ ಎಂದು ಗೆಮಾಶೆ ಹೇಳಿದರು.
ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಒಟ್ಟು 245 ಮಂದಿ ಪ್ರಯಾಣಿಕರು ಇದ್ದರು ಎಂದು ವಕ್ತಾರ ಚಾರ್ಲಿ ಹೋಬರ್ಟ್ ತಿಳಿಸಿದ್ದಾರೆ.