Advertisement
ಕಾಸರಗೋಡು ಜಿಲ್ಲೆಯ ಖಾಸಗಿ ಬಸ್ಸುಗಳಿಗೆ ನೀಲಿ ಬಣ್ಣವನ್ನು ನಿರ್ಧರಿಸಲಾಗಿದೆ.ಪೂರ್ತಿ ನೀಲಿ ಬಣ್ಣದೊಂದಿಗೆ ಬಸ್ಸಿನ ಕೆಳಭಾಗಕ್ಕೆ ಮೂರು ಲೈನ್ ಬಿಳಿ ಬಣ್ಣವನ್ನು ಬಳಿಯಲಾಗುವುದು.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅನೇಕ ಬಸ್ಸುಗಳು ತಮ್ಮ ಬಣ್ಣ ಬದಲಾಯಿಸುತ್ತಿವೆ.
Related Articles
Advertisement
ಕೇರಳ ರಾಜ್ಯ ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿ ಗಳಿಗೆ ರಿಯಾಯತಿ ದರ ನೀಡದೆ ಮಕ್ಕಳು ಖಾಸಗಿ ಬಸ್ಸಲ್ಲಿ ತುಂಬಿ ತುಳುಕುವುದರಿಂದ ಇತರ ಪ್ರಯಾಣಿಕರು ಈ ಬಸ್ಸನ್ನೇರಲು ಹಿಂಜರಿಯುತ್ತಿ ರುವುದಾಗಿ ಖಾಸಗಿ ಬಸ್ ಮಾಲಕರ ಆರೋಪವಾಗಿದೆ. ಈಗಾಗಲೇ ನಷ್ಟದಿಂದ ಅನೇಕ ಖಾಸಗಿ ಬಸ್‌ಗಳು ಬಂದ್ ಆಗಿವೆ. ಕೆಲವು ಬಸ್ಸುಗಳು ಪ್ರಯಾಣಿಕರ ಕೊರತೆಯಿಂದ ಕೆಲವು ಟ್ರಿಪ್‌ಗ್ಳನ್ನು ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.ಖಾಸಗಿ ಬಸ್‌ಗಳು ವಿವಿಧ ಬೇಡಿಕೆಗಳನ್ನು ಮುಂದಿ ರಿಸಿ ಇತೀ¤ಚೆಗೆ ಸಂಪು ಹೂಡಿದರೂ ಇದಕ್ಕೆ ಸರಕಾರ ಬೆಲೆ ನೀಡದೆ ದರ್ಪ ತೋರಿರುವುದಾಗಿ ಬಸ್ ಮಾಲಕರು ಆರೋಪಿಸುತ್ತಿದ್ದಾರೆ. ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂಬುದಾಗಿ ಸಿಎಂ ಹೇಳಿದರೂ ಕೊನೆಗೆ ಮಾತುಕತೆಗೆ ಸಿದ್ಧವಾಗಿಲ್ಲವಂತೆ.ಇದರಿಂದ ಸಮಸ್ಯೆ ಪರಿಹಾರವಾಗಿಲ್ಲ. ಸರಕಾರಕ್ಕೆ ಖಾಸಗಿ ಬಸ್ಸುಗಳ ಕೋಟಿಗಟ್ಟಲೆ ವಾರ್ಷಿಕ ತೆರಿಗೆ ಪಾವತಿಯಾಗುತ್ತಿದ್ದರೂ ಸಮಸ್ಯೆಯ ಪರಿಹಾರಕ್ಕೆ ಸರಕಾರ ಮುಂದಾಗುವುದಿಲ್ಲವೆಂಬ ಚಿಂತೆ ಇವರದು.ಬಹಳ ಹಿಂದಿನಿಂದಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಖಾಸಗಿ ಬಸ್‌ಗಳನ್ನು ಉಳಿಸಬೇಕೆಂಬ ನಿಲುವು ಹೆಚ್ಚಿನ ಪ್ರಯಾಣಿಕರದು. ಖಾಸಗಿ ಬಸ್ಸುಗಳ ಬಣ್ಣ ಬದಲಾಯಿಸುವುದು ವಿಮಾ ಕಂತು ಮತ್ತು ತೆರಿಗೆ ವೃದ್ಧಿಸುವುದರೊಂದಿಗೆ ಸಮಸ್ಯೆಯನ್ನೂ ಪರಿಹರಿಸಲು ಸರಕಾರ ಮುಂದಾಗಬೇಕಾಗಿದೆ. ಒಂದೇ ಬಣ, ನಮ್ಮ ಬಸ್ ಯಾವುದಣ್ಣಾ
ಬಸ್ಸುಗಳ ಈ ಬಣ್ಣ ಬದಲಾವಣೆಯಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಊರಿಗೆ ಪ್ರಯಾಣ ಬೆಳೆಸುವ ಬಸ್ಸಿನ ಬಣ್ಣವನ್ನು ದೂರದಿಂದಲೇ ಗುರುತಿಸಿ ಬಸ್ಸುಗಳನ್ನೇರುತ್ತಾರೆ. ಆದರೆ ಇದೀಗ ಎಲ್ಲ ಬಸ್ಸುಗಳು ಒಂದೇ ಬಣ್ಣದವುಗಳಾಗಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಅದರಲ್ಲೂ ನಿರಕ್ಷರಿಗಳು ಮತ್ತು ಮಹಿಳೆಯರು ಪರದಾಡಬೇಕಾಗಿದೆ. ಬಸ್ ನಿಲ್ದಾಣಗಳಿಗೆ ಸಾಲಾಗಿ ಬರುವ ನೀಲಿ ಬಣ್ಣದ ಬಸ್ಸುಗಳಲ್ಲಿ ತಮ್ಮ ಊರಿಗೆ ತೆರಳುವ ಬಸ್‌ಗಳನ್ನು ಹುಡುಕುವ ತವಕದಲ್ಲಿ ಬಸ್ಸುಗಳು ತೆರಳಿಯಾಗಿರುತ್ತವೆ. ಕೆಲವು ಬಾರಿ ನಿಲ್ದಾಣದಲ್ಲಿ ಇಳಿದ ಚಾಲಕರು ಮತ್ತು ನಿರ್ವಾಹಕರು ತಮ್ಮ ಬಸ್ ತಪ್ಪಿ ಬೇರೆ ಬಸ್ಸನ್ನೇರಿದ ಘಟನೆಯೂ ನಡೆದಿದೆ.
ಕರ್ನಾಟಕದಿಂದ ಹೊಸದಾಗಿ ಆರಂಭಿಸಿದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳೂ ನೀಲಿ ಬಣ್ಣವನ್ನು ಹೊಂದಿದೆ. ಇದು ಖಾಸಗಿ ಬಸ್ಸುಗಳ ಮಧ್ಯೆ ನಿಂತಾಗ ಕೆಲವು ಪ್ರಯಾಣಿಕರು ಇದನ್ನು ಖಾಸಗಿ ಬಸ್ಸೆಂದು ನಂಬಿ ಏರುವುದೂ ಇದೆ. – ಅಚ್ಯುತ ಚೇವಾರ್