Advertisement

ವಿಮಾನ ವಿಳಂಬವಾಗುತ್ತೆ ಎಂದ ಪೈಲೆಟ್ ಮೇಲೆ ಹಲ್ಲೆಗೆ ಮುಂದಾದ ಪ್ರಯಾಣಿಕ… ಕಾರಣ ಇಲ್ಲಿದೆ

09:47 AM Jan 15, 2024 | Team Udayavani |

ನವದೆಹಲಿ: ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ ವಾತಾವರಣ ಕಂಡುಬರುತ್ತಿದೆ ಆದ ಕಾರಣ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ತೊಂದರೆ ಉಂಟಾಗುವುದರ ಜೊತೆಗೆ ರೈಲು, ವಿಮಾನಗಳ ಹಾರಾಟದಲ್ಲೂ ತೊಂದರೆ ತಲೆದೋರಿದೆ.

Advertisement

ದಟ್ಟ ಮಂಜಿನ ಕಾರಣದಿಂದ ನವದೆಹಲಿಯಲ್ಲಿ ಹೊರಡಬೇಕಿದ್ದ ವಿಮಾನವೊಂದು ಕೆಲ ಗಂಟೆಗಳ ಕಾಲ ವಿಳಂಬವಾಗಿ ಹೊರಡುವ ಕುರಿತು ವಿಮಾನದ ಪೈಲೆಟ್ ಹೇಳುತ್ತಿದ್ದಂತೆ ವಿಮಾನದ ಹಿಂದಿನ ಸೀಟ್ ನಲ್ಲಿ ಕುಳಿತ್ತಿದ್ದ ಪ್ರಯಾಣಿಕನೋರ್ವ ಎದ್ದು ಬಂದು ಪೈಲೆಟ್ ಮೇಲೆ ಹಲ್ಲೆ ಯತ್ನಿಸಿದ್ದಾನೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಯಾಣಿಕ ಮಾಡಿದ ಹಲ್ಲೆಗೂ ಕಾರಣವಿದೆ:
ಅಸಲಿಗೆ ವಿಮಾನ ಒಂದಲ್ಲ ಎರಡಲ್ಲಾ ಬರೋಬ್ಬರಿ ಏಳು ಗಂಟೆ ವಿಳಂಬವಾಗಿ ಹೊರಟ ಕಾರಣ ಪ್ರಯಾಣಿಕ ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾನೆ ಇಂಡಿಗೋ ವಿಮಾನದ ಸಮಸ್ಯೆಯಿಂದ ತಾನು ಅಂತಾರಾಷ್ಟ್ರೀಯ ವಿಮಾನವನ್ನು ಮಿಸ್ ಮಾಡಿಕೊಂಡೆ ಎಂದು ಹೇಳಿಕೊಂಡಿದ್ದಾನೆ ಇದರಿಂದ ಕೋಪಗೊಂಡ ಪ್ರಯಾಣಿಕ ಇಂಡಿಗೋ ವಿಮಾನದ ಪೈಲೆಟ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.

ಹಲ್ಲೆ ಕುರಿತು ಪರ, ವಿರೋಧ ಚರ್ಚೆ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ಜನರ ಪ್ರತಿಕ್ರಿಯೆಗಳೂ ಬರತೊಡಗಿದವು. ಈ ಘಟನೆ ಸಂಪೂರ್ಣ ಖಂಡನೀಯ ಎಂದು ಜನರು ಹೇಳಿಕೊಂಡರೆ. ಇನ್ನು ಕೆಲವರು ಪ್ರಯಾಣಿಕನಿಗೆ ಗೊತ್ತು ವಿಮಾನ ವಿಳಂಬದಿಂದ ಆಗುವ ಸಮಸ್ಯೆ ಎಂದು ಹೇಳಿಕೊಡಿದ್ದಾರೆ.

X’ ನಲ್ಲಿ ಪೋಸ್ಟ್ ಮಾಡಿದ ಈಶ್ವರ್ ಸಿಂಗ್ ಎಂಬ ಬಳಕೆದಾರರು ‘ವಿಮಾನ ತಡವಾಗಿ ಬಂದರೆ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿ ಏನು ಮಾಡಲು ಸಾಧ್ಯ, ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಎಂದು ಬರೆದುಕೊಂಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next