Advertisement

ಅಫ್ಘಾನಿಸ್ಥಾನದಲ್ಲಿ ವಿಮಾನ ಪತನ ; 83 ಜನ ಸಾವು

10:03 AM Jan 28, 2020 | Hari Prasad |

ಕಾಬೂಲ್: ಇಲ್ಲಿನ ಘಜ್ನಿ ಪ್ರಾಂತ್ಯದ ದೆಹ್ ಯಾಕ್ ಜಿಲ್ಲೆಯಲ್ಲಿ 83 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ವಿಮಾನ ಒಂದು ಇಂದು ಅಪಘಾತಕ್ಕೀಡಾಗಿದೆ. ತಾಲೀಬಾನ್ ಪ್ರಾಬಲ್ಯವಿರುವ ಪ್ರಾಂತ್ಯದಲ್ಲಿ ಈ ವಿಮಾನ ಪತನಗೊಂಡಿರುವ ಸುದ್ದಿಯನ್ನು ಇಲ್ಲಿನ ಸ್ಥಳೀಯ ಅಧಿಕಾರಿ ಖಲೀಕ್ ದಾದ್ ಅಕ್ಬಾರಿ ಅವರು ಖಚಿತಪಡಿಸಿದ್ದಾರೆ. ಮತ್ತು ಘಟನಾ ಸ್ಥಳಕ್ಕೆ ವಿಶೇಷ ಪಡೆಗಳನ್ನು ರವಾನಿಸುವಂತೆ ಅವರು ಅಫ್ಘಾನ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Advertisement

ಪ್ರಾರಂಭದಲ್ಲಿ ಈ ವಿಮಾನ ಏರಿಯಾನ ಅಫ್ಘಾನ್ ಏರ್ ಲೈನ್ಸ್ ಮೂಲಕ ಕಾರ್ಯಾಚರಿಸುತ್ತಿರುವ ಬೋಯಿಂಗ್ 737-400 ವಿಮಾನ ಎಂದು ಹೇಳಲಾಗಿತ್ತಾದರೂ ಬಳಿಕ ಸರಕಾರೀ ಒಡೆತನದ ಈ ಸಂಸ್ಥೆ ತನ್ನ ಒಡೆತನಕ್ಕೆ ಸೇರಿದ ವಿಮಾನ ಅಪಘಾತಕ್ಕೀಡಾಗಿರುವ ಸುದ್ದಿಯನ್ನು ನಿರಾಕರಿಸಿದೆ.

ಹಾಗಾಗಿ ಇದು ವಿದೇಶಿ ವಿಮಾನವಾಗಿರಬಹುದು ಎಂಬ ಸಂಶಯ ಇದೀಗ ವ್ಯಕ್ತವಾಗಿದೆ. ಆದರೆ ಈ ವಿಮಾನ ಎಲ್ಲಿಂದ ಹೊರಟು ಎಲ್ಲಿಗೆ ಸಾಗುತ್ತಿತ್ತು ಎಂಬ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲರೂ ಮೃತರಾಗಿದ್ದಾರೆ ಮತ್ತು ಇಬ್ಬರು ಪೈಲಟ್ ಗಳ ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next