Advertisement

Kannada: ಅಧಿವೇಶನದಲ್ಲಿ “ಕನ್ನಡ ನಾಮಫಲಕ” ಕಾನೂನು ಅಂಗೀಕಾರವಾಗಲಿ: ಡಾ| ಮಹೇಶ ಜೋಷಿ

10:58 PM Feb 03, 2024 | Team Udayavani |

ಬೀದರ್‌: ಕನ್ನಡ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಅಳವಡಿಸುವ ಕುರಿತು ಸರಕಾರ ಅಧ್ಯಾದೇಶ ಹೊರಡಿಸಿದೆ. ಮುಂದಿನ ಅ ಧಿವೇಶನದಲ್ಲಿ ಈ ಕಾನೂನಿಗೆ ಅಂಗೀಕಾರ ಪಡೆಯಬೇಕು ಎಂದು ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ ಜೋಷಿ ಆಗ್ರಹಿಸಿದರು.

Advertisement

ನಗರದಲ್ಲಿ ಕನ್ನಡ ಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚಬಾರದು. ಈಗಾಗಲೇ ಮುಚ್ಚಿರುವ ಶಾಲೆಗಳನ್ನು ತೆರೆಯಬೇಕು. ಕನ್ನಡದ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸುವ ಕೆಲಸ ತ್ವರಿತವಾಗಬೇಕು ಎಂದರು.

ಸಾಹಿತ್ಯಕ್ಕೆ ಯಾವುದೇ ಬಂಧವಿಲ್ಲ, ಎಲ್ಲರನ್ನೂ ಗೌರವಿಸುವ ಮತ್ತು ಮನ್ನಣೆ ಕೊಡುವ ಕೆಲಸವನ್ನು ಕಸಾಪ ಮಾಡುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next