Advertisement
ವೈರಸ್ ಸೋಂಕಿತ ಶ್ವಾನಗಳು ಅನ್ನ ಆಹಾರ ಬಿಟ್ಟು ಮಂಕಾಗಿ ಮೂಲೆ ಹಿಡಿಯುತ್ತಿವೆ. ಗಾಬರಿಗೊಂಡ ಮಾಲೀಕರು ನಾಯಿಗಳನ್ನು ಕರೆದುಕೊಂಡು ಪಶು ಆಸ್ಪತ್ರೆಗೆ ಬರುತ್ತಿದ್ದು ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಹೊರತುಪಡಿಸಿ ಉಳಿದ ಹೋಬಳಿಗಳಲ್ಲಿ ನವೆಂಬರ್‌ನಿಂದ ಈ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಇದರ ಪ್ರಮಾಣ ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶ ಜಾಸ್ತಿಯಾಗಿದ್ದರಿಂದ ಈ ವೈರಸ್ ಹರಡುತ್ತಿದ್ದು, ಶ್ವಾನಗಳಿಗೆ ತಗಲುತ್ತಿದೆ. ಎರಡು ಮೂರು ದಿನಗಳು ರಕ್ತಬೇನೆ ಇರುತ್ತದೆ. ಶ್ವಾನಗಳು ಆಹಾರ ಸೇವಿಸುವುದಿಲ್ಲ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಶ್ವಾನಗಳು ಮೃತಪಡುವ ಸಾಧ್ಯತೆ ಜಾಸ್ತಿ ಇದೆ.
Advertisement
ಚಿಕ್ಕಮಗಳೂರಲ್ಲಿ ಶ್ವಾನಗಳಿಗೆ ಪಾರ್‌ವೋ ವೈರಸ್ ಭೀತಿ
07:49 PM Feb 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.