Advertisement
ಇದು ಕಳೆದ 3 ವರ್ಷದಲ್ಲಿ ಅವರು ಗೆದ್ದ ಪ್ರಥಮ ಅಂತಾರಾಷ್ಟ್ರೀಯ ಪ್ರಶಸ್ತಿಯೆನ್ನುವುದು ಗಮನಾರ್ಹ. ಸತತ ಗಾಯದ ಕಾರಣ ಅವರು ಒಲಿಂಪಿಕ್ಸ್ ಸೇರಿದಂತೆ ಹಲವು ಮಹತ್ವದ ಕೂಟಗಳನ್ನು ತಪ್ಪಿಸಿಕೊಂಡಿದ್ದರು. ಕಾಮನ್‌ವೆಲ್ತ್ ಚಿನ್ನ ಗೆದ್ದ ಪ್ರಮುಖ ಕ್ರೀಡಾಕೂಟಗಳಲ್ಲಿ ಸೋತಿರುವ ಅವರಿಗೆ ಈ ಪ್ರಶಸ್ತಿ ಸಂಜೀವಿನಿಯಾಗಬಲ್ಲದು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರು ಫೈನಲ್‌ವರೆಗೂ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರೂ ಅಂತಿಮ ಪಂದ್ಯದಲ್ಲಿ ಭಾರೀ ಸವಾಲು ಎದುರಿಸಿದರು. ಮೊದಲ ಗೇಮ್ ನಿಗದಿತ 21 ಅಂಕದ ಮಿತಿ ಮೀರಿತು. ಮುಂದಿನ ಗೇಮ್‌ನಲ್ಲಿ ಕಶ್ಯಪ್ ಪಾಲಿಗೆ ಸ್ವಲ್ಪ ಸುಲಭವಾಗಿತ್ತು. ಒಟ್ಟಾರೆ ಎರಡೂ ಗೇಮ್‌ಗಳನ್ನು 23-21, 21-14ರಿಂದ ಕಶ್ಯಪ್ ಗೆದ್ದು ಪ್ರಶಸ್ತಿಯ ಮೇಲೆ ಹಕ್ಕು ಸಾಧಿಸಿದರು. Advertisement
ಬ್ಯಾಡ್ಮಿಂಟನ್: ಆಸ್ಟ್ರೇಲಿಯನ್ ಓಪನ್ ಗೆದ್ದ ಕಶ್ಯಪ್
06:25 AM Feb 26, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.