Advertisement

ಸಿನಿಮಾವಾಗಲಿದೆ ಪಾರುಲ್ ಕಥೆ

04:30 AM Jun 22, 2020 | Lakshmi GovindaRaj |

ಬಹುತೇಕ ನಟಿಮಣಿಯರು ಲಾಕ್ಡೌನ್‍ನಲ್ಲಿ ಅಡುಗೆ ಸೇರಿದಂತೆ ಹಲವು ವಿಚಾರಗಳನ್ನು ಕಲಿತಿದ್ದಾರೆ. ಈ ಮೂಲಕ ತಮಗೆ ಗೊತ್ತಿಲ್ಲದ ವಿಷಯಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಅನೇಕರು ಕಥೆಗಾರ್ತಿಯಾಗಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಪಾರುಲ್ ಯಾದವ್. ಗೋವಿಂದಾಯ ನಮಃ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಪ್ಯಾರ್ಗೆ ಆಗ್ಬುಟ್ಟೈತೆ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡ ಪಾರುಲ್, ಆ ನಂತರ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದಿರುವ ಪಾರುಲ್, ಈ ಲಾಕ್ ಡೌನ್ ಸಮಯವನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅದು ಹೇಗೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕಥೆ ಬರೆಯುವ ಮೂಲಕ. ಹೌದು, ಪಾರುಲ್ ಯಾದವ್ ಲಾಕ್ ಡೌನ್‍ನಲ್ಲಿ ಎರಡು ಕಥೆ ಬರೆದಿದ್ದಾರೆ. ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಈ ಕಥೆಗಳು ಸಿನಿಮಾವಾಗಲಿವೆಯಂತೆ. ಈ ಮೂಲಕ ಪಾರುಲ್ ಕಥೆಗಾರ್ತಿಯಾಗಲಿದ್ದಾರೆ.

ಆರಂಭದಲ್ಲಿ ತಮಗೆ ಹೊಳೆದ ಒನ್‍ಲೈನ್ ಅನ್ನು ಬೆಳೆಸುತ್ತಾ ಹೋದ ಪಾರುಲ್‍ಗೆ ಮುಂದೆ ಒಳ್ಳೆಯ ಅಂಶಗಳು ಸಿಗುವ ಮೂಲಕ ಚೆಂದದ ಕಥೆ ಸಿದ್ಧವಾಯಿತಂತೆ. ಲಾಕ್ ಡೌನ್ ಸಂಪೂರ್ಣವಾಗಿ ತೆರವಾದ ಬಳಿಕ ಸ್ವತಃ ಪಾರುಲ್ ಅವರೇ ಈ ಕಥೆಗಳಿಗೆ ಬಂಡವಾಳ ಹೂಡಲಿದ್ದಾರಂತೆ. ಇಷ್ಟಕ್ಕೆ ಪಾರುಲ್ ಕನಸು ನಿಲ್ಲೋದಿಲ್ಲ. ಮುಂದಿನ ದಿನಗಳಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಚನೆಯೂ ಇದೆಯಂತೆ.

ಈ ಮೂಲಕ ಮನರಂಜನಾ ಕ್ಷೇತ್ರದ ಮತ್ತೊಂದು ಮಗ್ಗುಲಿಗೂ ತೆರೆದುಕೊಳ್ಳಲಿದ್ದಾರೆ. ಸದ್ಯ ಪಾರುಲ್ ನಟಿಸಿರುವ ಬಟರ್ ಫ್ಲೈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ಪಾರುಲ್ ಲಾಕ್ ಡೌನ್ ಸಮಯವನ್ನು ವರ್ಕೌಟ್, ಡಯೆಟ್ ಮಾಡುತ್ತಾ ಖುಷಿಯಿಂದ ಕಳೆಯುತ್ತಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next