Advertisement
ಶಿರಾಳಕೊಪ್ಪ ಪಟ್ಟಣದ ನೇರಲಗಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾಶಕ್ತಿ ಕೇಂದ್ರ ಮಟ್ಟದ ಪೇಜ್ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರೀತಿ- ವಿಶ್ವಾಸದಿಂದ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ ಅವರು ಸಂಸದ ಬಿ.ವೈ. ರಾಘವೇಂದ್ರ ಅಭಿವೃದ್ಧಿಯ ವಿಚಾರದಲ್ಲಿ ದೇಶದಲ್ಲೇ ಟಾಪ್- 5 ರ ಸ್ಥಾನ ಪಡೆದಿದ್ದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿಕಾರಿಪುರ ತಾಲೂಕಿನ ರೈತರ ಪರ ಜನಪರ, ದೀನದಲಿತರ ಪರ ಹಿಂದುಳಿದವರ ಪರ ಧ್ವನಿಯಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ.
Related Articles
Advertisement
ಮಲೆನಾಡು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಬಿ.ವೈ. ರಾಘವೇಂದ್ರ ಯಡಿಯೂರಪ್ಪನವರ ಮಗನಾಗಿದ್ದರೂ ಎರಡು ವರ್ಷಗಳ ಕಾಲ ಸಂಘಟನಾ ಚತುರರಾಗಿ ರಾಜ್ಯದೆಲ್ಲೆಡೆ ಪಕ್ಷ ಸಂಘಟಿಸಿ ಪರಿಶ್ರಮದಿಂದ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಂದು ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ. ಸಮೀಕ್ಷೆಯ ಪ್ರಕಾರ ಯಡಿಯೂರಪ್ಪನವರಿಗೆ 60%, ಬೊಮ್ಮಾಯಿಯವರಿಗೆ 35%, ವಿಜೆಯೇಂದ್ರ ಅವರಿಗೆ 22% ಮೂಲಕ ವಿಜೆಯೇಂದ್ರ ಅವರು ರಾಜ್ಯದ ನಾಯಕರಾಗುತ್ತಾರೆ ಎಂಬುದು ಸಮೀಕ್ಷೆ ತಿಳಿಸಿದೆ ಎಂದರು.
ಅರಣ್ಯ ಅಭಿವೃದ್ಧಿ ನಿಗಮದ ಕೊಳಗಿ ರೇವಣಪ್ಪ ಮಾತನಾಡಿ, ಯಡಿಯೂರಪ್ಪ ಇಲ್ಲದೆ ಹೋದರೆ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ. ಅವರನ್ನು ರಾಜಕೀಯವಾಗಿತುಳಿಯಲು ನಡೆಸುವ ಪ್ರಯತ್ನ ವ್ಯರ್ಥ. ಎಲ್ಲಾ ಸಮುದಾಯದ ಜನತೆಗೆ ಪ್ರಾಧಾನ್ಯತೆ ನೀಡಿ ರಾಜ್ಯ ಮುನ್ನಡೆಸಿ ಆದರ್ಶಪ್ರಾಯರಾಗಿದ್ದಾರೆ ಎಂದರು. ಸಭೆಯಲ್ಲಿ ಮಂಡಲ ಅಧ್ಯಕ್ಷ ವೀರೇಂದ್ರ ಪಾಟೀಲ್, ಹಿರಿಯ ಬಿಜೆಪಿ ಮುಖಂಡರಾದ ಅಗಡಿ ಅಶೋಕ್, ಸಣ್ಣ ಹನುಮಂತಪ್ಪ, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಗಾಯಿತ್ರಿ ಮಲ್ಲಪ್ಪ, ನಿವೇದಿತಾ ರಾಜು, ಸವಿತಾ ಶಿವಕುಮಾರ್, ಸತೀಶ್, ಶಂಭು ಇತರರು ಇದ್ದರು.