Advertisement

ಪಕ್ಷ ತ್ಯಜಿಸಲಾರೆ: ರಾಜೇ ಗೌಡ

01:08 AM Jul 11, 2019 | Team Udayavani |

ಬೆಳ್ತಂಗಡಿ: ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ, ನನ್ನ ಕ್ಷೇತ್ರದ ಗೌರವ ಉಳಿಸುವ ದೃಷ್ಟಿಯಿಂದ ಆಮಿಷಕ್ಕೆ ಒತ್ತಡಕ್ಕೆ ಒಳಗಾಗಲಾರೆ ಎಂದು ಧರ್ಮಸ್ಥಳದಲ್ಲಿ ಕಾಂಗ್ರೆಸ್‌ ಶಾಸಕ ರಾಜೇ ಗೌಡ ಪ್ರತಿಕ್ರಿಯಿಸಿದ್ದಾರೆ.

Advertisement

ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಪತ್ರಿಕೆ ಮಾತನಾಡಿಸಿದಾಗ, ನನಗೆ ರಾಜಕೀಯ ಬೆಳೆವಣಿಗೆ ಕುರಿತು ಮಾಹಿತಿ ಇರಲಿಲ್ಲ. ಶನಿವಾರ ಕಾರ್ಯಕ್ರಮ ನಿಮಿತ್ತ ಬಂದು ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದೆ. ಬಳಿಕ ಇಷ್ಟೊಂದು ಹೈ ಡ್ರಾಮ ನಡೆದಿದೆ. ಬಿ.ಎಸ್‌. ಯಡಿಯೂರಪ್ಪ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಆದರೆ ಇದಾವುದಕ್ಕೂ ನಾನು ತಲೆಕೆಡಿಸಿ ಕೊಂಡಿಲ್ಲ. ಅಧಿಕಾರದ ದುರಾಸೆ ನನಗಿಲ್ಲ ಎಂದರು.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ನನ್ನನ್ನು ಸಂರ್ಕಿಸಿದ್ದು ಮುಂದಿನ ನಡೆ ಕುರಿತು ವಿಚಾರಿಸಿದ್ದಾರೆ. ಆದರೂ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next