Advertisement

ಕೇರಳ ಬ್ಲಾಸ್ಟರ್ಸ್‌ ತಂಡದ ಷೇರು ಮಾರಿದ ಸಚಿನ್‌

03:44 PM Sep 17, 2018 | |

ಮುಂಬಯಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫ‌ುಟ್‌ಬಾಲ್‌ ಆರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎನ್ನುವಷ್ಟರಲ್ಲಿ ತನ್ನಲ್ಲಿದ್ದ ಫ್ರಾಂಚೈಸಿ ಷೇರುಗಳನ್ನು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಮಾರಾಟ ಮಾಡಿದ್ದಾರೆ. ಇದರೊಂದಿಗೆ ಕೇರಳ ಫ್ರಾಂಚೈಸಿ ಜತೆಗಿನ ಅವರ 4 ವರ್ಷಗಳ ಸಹ ಮಾಲಕತ್ವ ಒಪ್ಪಂದ ಮುಗಿದಿದೆ. 

Advertisement

“ಕೇರಳ ಬ್ಲಾಸ್ಟರ್ಸ್‌ ತಂಡದ ಜತೆಗಿನ 4 ವರ್ಷಗಳ ಸುದೀರ್ಘ‌ ಒಪ್ಪಂದ ಅತ್ಯಂತ ಖುಷಿ ನೀಡಿದೆ. ಇಡೀ ಕ್ಲಬ್‌ ತಂಡ ನನ್ನ ಜೀವನದ ಅವಿಭಾಜ್ಯ ಅಂಗ ಎನ್ನುವಂತಿತ್ತು. ಕೇರಳಕ್ಕಾಗಿ, ಇಲ್ಲಿನ ಜನತೆಗಾಗಿ ನನ್ನ ಹೃದಯ ಸದಾ ಮಿಡಿಯುತ್ತಿರುತ್ತದೆ.  ತಂಡಕ್ಕೆ ಎಲ್ಲ ರೀತಿಯಲ್ಲೂ ಒಳಿತಾಗಲಿ ಎಂದು ಹಾರೈಸುತ್ತೇನೆ’ ಎಂದು ಸಚಿನ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ.

2014ರಲ್ಲಿ ಸಚಿನ್‌ ತೆಂಡುಲ್ಕರ್‌ ಕೇರಳ ಬ್ಲಾಸ್ಟರ್ಸ್‌ ತಂಡದ ಸಹ ಮಾಲಕರಾಗಿ ಸೇರಿಕೊಂಡಿದ್ದರು. ಮೊದಲ ಆವೃತ್ತಿಯಲ್ಲಿ ಕೇರಳ ತಂಡ ರನ್ನರ್‌ಅಪ್‌ ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next