ಎಂದರೆ ಸಂಪನ್ಮೂಲ ಕ್ರೋಢೀಕರಣ. ರೈಲು ಸೇವೆ ಅಭಿವೃದ್ಧಿಯೂ ಆಗಬೇಕು ಆಧುನೀಕರಣವೂ ಆಗಬೇಕು ಆದರೆ ಟಿಕೆಟ್ ದರ ಪರಿಷಷ್ಕರಣೆ ಆಗಬಾರದು. ಚುನಾವಣಾ ವರ್ಷದಲ್ಲಂತೂ ಹೊಸ ಹೊಸ ಯೋಜನೆಗಳು ಜಾರಿಗೆ ಬರಲೇಬೇಕು, ಹೊಸ ಸುಂಕ ಹೇರಿ ಸಂಕಷ್ಟಕ್ಕೆ
ಸಿಲುಕಲೂಬಾರದು ಎಂಬ ಮನೋಧರ್ಮ ನಮ್ಮದು.
Advertisement
ಸರಕಾರಕ್ಕೆ ಸಲ್ಲಬೇಕಾದ ತೆರಿಗೆ ತಪ್ಪಿಸಿಕೊಳ್ಳಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡುವುದರಲ್ಲಿ ನಮಗೆ ಬಹಳ ಸಂತೋಷವಾಗುತ್ತದೆ. ಹೀಗೆ ಮಾಡಿ ಅಷ್ಟು ತೆರಿಗೆ ಉಳಿಸಿದೆ, ಹಾಗೆ ಮಾಡಿದರೆ ಚಿಕ್ಕಾಸೂ ತೆರಿಗೆ ಕಟ್ಟಬೇಕಾಗಿಲ್ಲ ಎಂದು ಅರ್ಥಶಾಸ್ತ್ರ ಪರಿಣತಿಯ ತಮ್ಮ ಜ್ಞಾನ ಪ್ರದರ್ಶಿಸುತ್ತಾ ಬೀಗುತ್ತೇವೆ. ಹೋಗಲಿ ಬಿಡೋ, ದೊಡ್ಡ ತಿಮಿಂಗಲಗಳೇ ಬಲೆಗೆ ಸಿಗದಿರುವಾಗ ನನ್ನ ನಿನ್ನಂತಹ ಸಾಮಾನ್ಯಮೀನುಗಳನ್ನು ಹಿಡಿಯಲು ಆದಾಯ ತೆರಿಗೆ ಇಲಾಖೆಯ ಬಳಿ ಅಷ್ಟೊಂದು ಸಮಯ ಎಲ್ಲಿದೆ ಬಿಡೋ. ನೀನೇನೂ ಟ್ಯಾಕ್ಸ್ ರಿಟರ್ನ್ ಸಲ್ಲಿಸಬೇಕಾಗಿಲ್ಲ ಎಂದು ಅಮಾಯಕರಿಗೆ ಪುಕ್ಕಟೆ ಸಲಹೆ ಕೊಡುತ್ತೇವೆ.
ಎನ್ನುವುದಂತೂ ಒಂದು ಸಕಾರಾತ್ಮಕ ಪರಿಣಾಮ ಎನ್ನುವುದರಲ್ಲಿ ಸಂದೇಹವಿಲ್ಲ.
Related Articles
ಎನ್ನುವ ಭಾವನೆ ನಮ್ಮ ಸಮಾಜದಲ್ಲಿ ಮೂಡಬೇಕಾಗಿದೆ. ಸರಕಾರದ ನಿರ್ಣಯದಿಂದ ತೆರಿಗೆ ತಪ್ಪಿಸುವುದು ಕಷ್ಟ ಎನ್ನುವ ಭಾವನೆ ನಿಧಾನವಾಗಿ ಜನರಲ್ಲಿ ಮೂಡುತ್ತಿದೆ.
Advertisement
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಯ ವಿರುದ್ಧ ಅನೇಕರು ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವ ನೆಲೆಯಲ್ಲಿ ಕೋರ್ಟು ಮೆಟ್ಟಿಲೇರಿದ್ದರು. ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಯಲ್ಲಿ ಅಗಾಧ ಸಾಧನೆ ಮಾಡುತ್ತಿರುವ ಸರ್ವಾಧಿಕಾರಿ ನಾಯಕತ್ವದ ಕಮ್ಯುನಿಸ್ಟ್ ಚೀನಾದೊಂದಿಗೆ ಭಾರತದ ಸಾಧನೆಯನ್ನು ತುಲನೆ ಮಾಡುವ ಮೊದಲು ಚೀನಾದ ಕಠಿಣ ಕಾನೂನುಗಳು, ಸರಕಾರದ ವಿಪುಲ ಸಂಪನ್ಮೂಲ ಕ್ರೋಢೀಕರಣ ಶಕ್ತಿಯನ್ನು ಏಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ? ತೆರಿಗೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ, ಪ್ರಾಮಾಣಿಕ ತೆರಿಗೆದಾರರನ್ನು ಪ್ರೋತ್ಸಾಹಿಸುವ ಇಚ್ಛಾಶಕ್ತಿ ತೋರಿಸುವುದರಿಂದ ಜನರ ಅವಕೃಪೆಗೆ ಪಾತ್ರರಾಗಬೇಕಾಗುತ್ತ ದೆಂದು ನಮ್ಮ ರಾಜಕಾರಣಿಗಳು ಯೋಚಿಸುತ್ತಾರೆ. ವಿರೋಧಿಗಳು ಅಂತಹ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ದೇಶದ ಹೊರಗಿನ ಕಪ್ಪು ಹಣ ವಾಪಾಸು ತರುವುದು ಒತ್ತಟ್ಟಿಗಿರಲಿ, ದೇಶದೊಳಗೆ ಬೆಳೆಯುತ್ತಿರುವ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೆಲಸವೇ ಅಷ್ಟೊಂದು ಸುಲಭವಲ್ಲ. ನಮ್ಮ ತೆರಿಗೆ ವ್ಯವಸ್ಥೆ ಸರಿ ಯಾದರೆ ಅಚ್ಛೇ ದಿನ ತನ್ನಿಂದ ತಾನಾಗಿಯೇ ಬರುತ್ತದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ತಡೆಯಲು ಪರಿಣಾಮಕಾರಿ ತೆರಿಗೆ ವ್ಯವಸ್ಥೆ ಸ್ಥಾಪಿಸಲ್ಪಡುವುದು ಅನಿವಾರ್ಯ. ಸರಕಾರದ ಅಂತಹ ಪ್ರಯತ್ನಗಳನ್ನು ವೈಯಕ್ತಿಕ ಲಾಭ ನಷ್ಟದ ಕುರಿತಾಗಿ ಚಿಂತಿಸದೆ ಪ್ರಬಲವಾಗಿ ಸಮರ್ಥಿಸುವ ಪ್ರಜ್ಞಾವಂತಿಕೆ ನಮ್ಮಲ್ಲಿ ಬೆಳೆಯಬೇಕಾಗಿದೆ. ನಕ್ಸಲ್ ಉಗ್ರವಾದದಂತಹ ಸಮಸ್ಯೆಗಳು ರಾಷ್ಟ್ರದ ಏಕತೆಗೆ ಭಂಗ ತರುತ್ತಿರುವಾಗ ಸುಸಜ್ಜಿತ ಮತ್ತು ಅತ್ಯಾಧುನಿಕ ಪೊಲೀಸ್ ವ್ಯವಸ್ಥೆ ನಮಗೆ ಬೇಕಾಗಿದೆ. ದೈತ್ಯ ಸೈನ್ಯ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾದ ಉಪಟಳ, ಪಾಕಿಸ್ತಾನದ ಕಿರುಕುಳಕ್ಕೆ ಎದಿರೇಟು ನೀಡಬಲ್ಲ ಜಾಗತಿಕ ಮಿಲಿಟರಿ ಶಕ್ತಿಯಾಗಿ ದೇಶ ಗುರುತಿಸಿಕೊಳ್ಳಬೇಕಾದರೆ ಸಾಮರ್ಥ್ಯವುಳ್ಳವರು ಪ್ರಾಮಾಣಿಕವಾಗಿ ತೆರಿಗೆ ನೀಡಲೇಬೇಕು.
ಆದಾಯದ ಮೂಲವನ್ನು ಮುಚ್ಚಿಡದೆ ಅಧಿಕೃತವಾಗಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವ ಮೂಲಕ ಘೋಷಿಸಿ ಕೊಂಡರೆ ನಮ್ಮ ಆರ್ಥಿಕ ವಹಿವಾಟುಗಳು ಕಾನೂನು ಬದ್ಧವಾಗುತ್ತವೆ. ಒಂದೆರಡು ಸಾವಿರ ಟ್ಯಾಕ್ಸ್ ನೀಡುವುದರಿಂದ ಹಿಂಜರಿಯುವುದು ಸರಿಯಲ್ಲ. ನಿಮ್ಮ ಆದಾಯದ ಪಕ್ಕಾ ದಾಖಲೆ ಸೃಷ್ಟಿಯಾದಂತಾಗುತ್ತದೆ. ಮನೆ ಸಾಲ, ವ್ಯಾಪಾರ ವಹಿವಾಟಿಗಾಗಿ ಸಾಲ ಸೌಲಭ್ಯ ಪಡೆಯಲು ರಹದಾರಿ ಸಿಕ್ಕಂತಾಗುತ್ತದೆ. ಸರಿಯಾದ ತೆರಿಗೆ ನೀಡುವುದರಿಂದ ಎಲ್ಲಿ ಸಿಕ್ಕಿ ಬೀಳುತ್ತೇವೋ ಎನ್ನುವ ಭಯ ಕಾಡದೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ತೆರಿಗೆನೀಡುವುದೆಂದರೆ ಹಣ ವ್ಯರ್ಥ ಮಾಡಿದಂತೆ ಎನ್ನುವ ನಮ್ಮ ಮನೋಧರ್ಮ ಬದಲಾಗಬೇಕಾಗಿದೆ. ಪ್ರಾಮಾಣಿಕ ತೆರಿಗೆ ನೀಡುವವರು ದೇಶದ ಪ್ರಗತಿಯ ಭಾಗೀದಾರರು. ದೇಶ ಸೇವೆ ಮಾಡಲು ಪಾಕಿಸ್ಥಾನ-ಚೀನಾ ಗಡಿಗೆ ಹೋಗಬೇಕಾಗಿಲ್ಲ. ಸರಿಯಾದ ತೆರಿಗೆ ನೀಡುವುದರ ಮೂಲಕ ರಾಷ್ಟ ಕಟ್ಟುವ ಕೆಲಸ ಮಾಡಬಹುದು. *ಬೈಂದೂರು ಚಂದ್ರಶೇಖರ ನಾವಡ