Advertisement

ಮನೆಗಳಲ್ಲಿ ಪಕ್ಷಗಳ ಕಚೇರಿ, ಒಂದೇ ಕಡೆ ಎಲ್ಲ ಅಭ್ಯರ್ಥಿಗಳ ಪ್ರಚಾರ ಫಲಕ!

09:54 PM Apr 15, 2019 | sudhir |

ಕುಂಬಳೆ: ಲೋಕಸಭಾ ಚುನಾವಣೆ ಸಮೀಪಿಸಿದ ಭರಾಟೆಯಲ್ಲಿ ಎಲ್ಲ ಪಕ್ಷಗಳ ನಾಯಕರು ರಂಗಕ್ಕಿಳಿದಿದ್ದಾರೆ. ಜತೆಗೆ ಕೆಲವರು ತಮ್ಮ ಪತ್ನಿ, ಮಕ್ಕಳನ್ನೂ, ಬಳಗ ಮಿತ್ರರನ್ನು ಮತಯಾಚನೆಗೆ ರಂಗಕ್ಕಿಳಿಸಿದ್ದಾರೆ. ಇನ್ನೂ ಕೆಲವರು ಮುಂದುವರಿದು ತಮ್ಮ ಸ್ವಂತ ಸ್ಥಳ, ವಾಹನ, ಕಟ್ಟಡ, ಮನೆಗಳನ್ನೂ ಪಕ್ಷಗಳಿಗೆ ನೀಡಿರುವರು. ಕೆಲವರು ಉಚಿತವಾಗಿ ತಾವು ನಂಬಿಕೊಂಡು ಬಂದಿರುವ ಪಕ್ಷಗಳ ತತ್ವಾದರ್ಶಗಳ ಪ್ರೇಮದಲ್ಲಾದರೆ ಇನ್ನು ಕೆಲವರು ಕಾಂಚಾಣದ ಆಸೆಗಾಗಿರುವ ಕೊಡುಗೆಯಾಗಿದೆ. ಪಕ್ಷಕ್ಕೆ ನಿಧಿಯನ್ನು ಈ ಕಾರಣದಲ್ಲಿ ದುರ್ಬಳಕೆ ಆರೋಪ ಕೇಳಿಬರುತ್ತಿದೆ. ಕೆಲವರು ತಮ್ಮ ಖಾಸಗಿ ಸ್ಥಳವನ್ನು ಎಲ್ಲ ಪಕ್ಷಗಳ ಪ್ರಚಾರ ಸಭೆಗೆ ಮತ್ತು ಪ್ರಚಾರ ಫಲಕ ನಾಟಲು ಹಣ ಪಡೆದು ನೀಡುವರು.

Advertisement

ಯುವಕರದೇ ಕಾರುಬಾರು
ಎಲ್ಲ ಪಕ್ಷಗಳ ಕಚೇರಿಗಳಲ್ಲಿ ಹೆಚ್ಚಾಗಿ ಯುವಕರನ್ನೇ ಕಾಣಬಹುದು. ಇವರು ಮನೆ ಮನೆ ಸಂಪರ್ಕಕ್ಕೆ ಬಿಸಿಲಿನ ತಾಪದ ನೆಪದಲ್ಲಿ ತೆರಳಲು ಹಿಂದೇಟು ಹಾಕಿ ಇಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವರು. ಇಲ್ಲಿ ಊಟ ಉಪಾಹಾರ ಇರುವುದಲ್ಲದೆ ಗುಟ್ಟಿನಲ್ಲಿ ಭರ್ಜರಿ ಬಾಡೂಟವೂ ಇರುವುದು. ಇವರಲ್ಲಿ ಪಕ್ಷಗಳ ನಾಯಕರು ಬಲವಂತವಾಗಿ ಯಾವುದನ್ನೂ ಮಾಡಿಸುವಂತಿಲ್ಲ.

ನಾಯಕರು ಮುನಿಸಿಕೊಂಡಲ್ಲಿ ತತ್‌ಕ್ಷಣ ಇವರು ಬೇರೆ ಪಕ್ಷಗಳ ಮೊರೆ ಹೋಗುವ ಭಯವೂ ಇಲ್ಲದಿಲ್ಲ. ಆದುದರಿಂದ ಇವರನ್ನು ಉಪಾಯದಿಂದ ಸಾಗಹಾಕಲಾಗುವುದು. ಪಕ್ಷಗಳ ಕಚೇರಿಯಲ್ಲಿ ಮತ್ತು ಬೆಂಬಲಕ್ಕೆ ಯುವಕರ ಕೊರತೆ ಕಾಡದಂತೆ ಆಯಾ ಪಕ್ಷಗಳ ನಾಯಕರು ಬ್ಯಾಲೆನ್ಸ್‌ ಕಾಪಾಡಿಕೊಳ್ಳುತ್ತಾರೆ. ಯುವಕರಲ್ಲಿ ಕೆಲವರು ಪೈಡ್‌ ಕಾಯಕರ್ತರೂ ಇದ್ದಾರೆ. ಕೂಲಿ ನಾಲಿ ಮಾಡಿ ಜೀವನ ಮಾಡುವವರಿಗೆ ಸಂಬಳ ಕೊಡದೆ ನಿರ್ವಾಹವಿಲ್ಲ. ಇನ್ನು ಕೆಲವು ಸೋಮಾರಿಗಳು ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೂ ಇದ್ದಾರೆ. ಹೆಚಾÌಗಿ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆಯೇ ಅಧಿಕವಿದ್ದು ಎಲ್ಲ ಪಕ್ಷಗಳ ಕಣ್ಣು ಯುವಕರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next