ಕ್ಲಾಡಿಯಾ ಗೋಲ್ಡಿನ್, ದುಡಿಮೆ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಕುರಿತಾಗಿನ ಸಂಶೋ ಧನೆಗಾಗಿ ಸತ್ಯಾಂಶ ತಮ್ಮ ಜೀವ ಮಾನವನ್ನೇ ಮುಡಿಪಾಗಿಟ್ಟಿದ್ದಾರೆ. ಕ್ಲಾಡಿಯಾ ಗೋಲ್ಡಿನ್, ಅರ್ಥವಿಜ್ಞಾ ನದಲ್ಲಿ ಈವರೆಗೆ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆಯರ ಪೈಕಿ ಮೂರನೆ ಯವರಾಗಿದ್ದಾರೆ. 2009ರಲ್ಲಿ ಎಲಿ ನಾರ್ ಒಸ್ಟ್ರೋಮ್ ಮತ್ತು 2019ರಲ್ಲಿ ಈಸ್ತರ್ ಡುಪ್ಲೊ ಈ ಪ್ರಶಸ್ತಿಗೆ ಭಾಜನ ರಾಗಿದ್ದರು.
Advertisement
ಅರಿವಿನ ವಿಸ್ತರಣೆಕಾರ್ಮಿಕ ಮಾರು ಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಕುರಿತಾದ ಅರಿವಿನ ವಿಸ್ತರಣೆಗೆ ತಮ್ಮ ಸಂಶೋಧನೆಯ ಮೂಲಕ ಕ್ಲಾಡಿಯಾ ಗೋಲ್ಡಿನ್ ಮಹತ್ತರ ಕೊಡುಗೆ ನೀಡಿ ದ್ದಾರೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾತ್ರ ಮತ್ತು ಪಾಲು ಗಾರಿಕೆ ಕುರಿತಾದ ಅರಿವನ್ನು ಹೊಂದು ವುದು ಅತ್ಯವಶ್ಯಕ. ಕ್ಲಾಡಿಯಾ ಗೋಲ್ಡಿ ನ್ ಅವರ ಅಧ್ಯಯನ ಮತ್ತು ಸಂಶೋ ಧನೆ ಈ ಕುರಿತಾದ ಮುಂದಿನ ಅಧ್ಯ ಯನಕ್ಕೆ ಬೇಕಾದ ತಳಹದಿಯನ್ನು ಒದಗಿಸಿದೆ.
ಕ್ಲಾಡಿಯಾ ಗೋಲ್ಡಿನ್ 200 ವರ್ಷಗಳ ಅಂಕಿಅಂಶಗಳನ್ನು ಸಂಗ್ರಹಿಸಿ, ಅವುಗಳ ಆಧಾರದಲ್ಲಿ ಕಾರ್ಮಿಕ ಮಾರುಕಟ್ಟೆ ಯಲ್ಲಿ ಮಹಿಳೆಯರ ಪಾಲುಗಾರಿಕೆ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನ ಫಲಿತಾಂಶದ ಪ್ರಕಾ ರ ಆರ್ಥಿಕ ಪ್ರಗತಿಯ ಹೊರತಾಗಿ ಯೂ ದುಡಿಮೆ ಮಾರುಕಟ್ಟೆಯಲ್ಲಿ (Labour Market) ಮಹಿಳೆಯರ ಪಾಲುಗಾರಿಕೆ ತೃಪ್ತಿಕರವಾಗಿ ವೃದ್ಧಿಸಿಲ್ಲ ಮತ್ತು ಮಹಿಳೆಯರ ವೇತನ ಪುರುಷರ ವೇತನ ಹೆಚ್ಚಿದ ರೀತಿಯಲ್ಲಿ ಏರಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಸ್ವಲ್ಪ ಪ್ರಗತಿ ಸಾಧಿಸಿದ್ದರೂ ದುಡಿಮೆ ಮಾರು ಕಟ್ಟೆಯಲ್ಲಿ ಅವರ ಪಾಲುಗಾರಿಕೆ ಹಾಗೂ ವೇತನಗಳಲ್ಲಿ ಮಹಿಳೆಯರು ಮತ್ತು ಪುರುಷರು ನಡುವಿನ ಅಂತರ ಮಾತ್ರ ಇನ್ನೂ ಕುಗ್ಗಿಲ್ಲ. 2023ರ ಜಾಗತಿಕ ಲಿಂಗ ಅಸಮಾನತೆ ವರದಿ (ಎlಟಚಿಚl ಜಛಿn ಛಛಿr ಜಚಟ rಛಿಟಟ್ಟಠಿ) ಪ್ರಕಾರ ಮಹಿಳೆ ಯರ ಮತ್ತು ಪುರುಷರ ನಡುವಿನ ಅಂತರ ಶೇ. 68.4ರಷ್ಟಿದೆ. ಈಗಿನ ಪ್ರಗತಿ ದರವನ್ನು ಪರಿಗಣಿಸಿದರೆ ಈ ಅಂತರವನ್ನು ಹೋಗಲಾಡಿಸಲು ಒಂದು ಶತಮಾನವೇ ಬೇಕಾಗಬಹುದು. ಪ್ರಗತಿ ಹಿಂಬಾಲಿಸದ ಪಾಲುಗಾರಿಕೆ
ಕ್ಲಾಡಿಯಾ ಗೋಲ್ಡಿನ್ ಅವರ ಅಧ್ಯ ಯನ ಫಲಿತಾಂಶದ ಪ್ರಕಾರ ದುಡಿಮೆ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಆರ್ಥಿಕ ಪ್ರಗತಿಗನುಗುಣವಾಗಿ ಹೆಚ್ಚಳ ಕಂಡಿಲ್ಲ. ಅಂದರೆ ಮಹಿಳೆಯರ ಪಾಲುಗಾರಿಕೆ ಪ್ರಗತಿಯನ್ನು ಹಿಂಬಾಲಿಸಲಿಲ್ಲ. ಅಷ್ಟೇ ಅಲ್ಲದೆ ವಿವಾಹಿತ ಮಹಿಳೆಯರ ಪಾಲುಗಾರಿಕೆ ಕುಗ್ಗಿದೆ. ಕೃಷಿ ಆಧಾರಿತ ಆರ್ಥಿಕತೆ, ಕೈಗಾರಿಕ ಆರ್ಥಿಕತೆಯಾಗಿ ಪರಿವರ್ತ ನೆಯಾಗುತ್ತಾ ಹೋದಂತೆ ಇದು ಸಂಭವಿಸಿದೆ. ಆದರೆ ಅನಂತರ ಸೇವಾ ಕ್ಷೇತ್ರ (Service Sector)ದ ವಿಸ್ತರಣೆ ಮತ್ತು ಪ್ರಗತಿಯ ಫಲವಾಗಿ ಪರಿಸ್ಥಿತಿ ತುಸು ಸುಧಾರಿಸಲಾರಂಭಿಸಿದೆ.
ನೊಬೆಲ್ ಅಕಾಡೆಮಿ ಹೇಳಿರು ವಂತೆ ಕ್ಲಾಡಿಯಾ ಗೋಲ್ಡಿನ್ ಅವರ ಅಧ್ಯಯನದ ಫಲಿತಾಂ ಶಗಳು ಅಮೆರಿಕ ಮಾತ್ರವಲ್ಲದೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಅನ್ವಯಿಸುತ್ತವೆ ಮತ್ತು ಜಾಗ ತಿಕವಾಗಿ ಪ್ರಸ್ತುತವಾಗಿವೆ. “ಲಿಂಗ – ಅಂತರ ತಿಳಿದುಕೊಳ್ಳುವುದು’ (Under standing Gender gap) ಎಂಬ ತಮ್ಮ ಪುಸ್ತಕದಲ್ಲಿ ಕ್ಲಾಡಿಯಾ ಗೋಲ್ಡಿನ್ ಹೇಳಿರುವಂತೆ ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರ ನಡುವಿನ ಉದ್ಯೋಗ ದರಗಳಲ್ಲಿ ವ್ಯತ್ಯಾಸಗಳಿವೆ.
Related Articles
ಕ್ಲಾಡಿಯಾ ಗೋಲ್ಡಿನ್ ಸಂಶೋ ಧನೆಯ ಮತ್ತೂಂದು ಅಂಶವೆಂದರೆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಯ ಫಲವಾಗಿ ಹಾಗೂ ಸೇವಾ ಕ್ಷೇತ್ರಗಳ ವಿಸ್ತರಣೆ ಮತ್ತು ತ್ವರಿತ ಪ್ರಗ ತಿಯ ಫಲವಾಗಿ ದುಡಿಮೆ ಮಾರು ಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚಲಾರಂಭಿಸಿದೆ. ಆದರೆ ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚಲಾ ರಂಭಿಸಿದರೆ ಇತರ ಹಲವು ಕ್ಷೇತ್ರಗಳಲ್ಲಿ ಅಡೆತಡೆಗಳು (barriers) ಉದ್ಭವಿಸುತ್ತಿವೆ. ಕಚೇರಿ ಕೆಲಸಗಳಲ್ಲಿ (white collar job) ಮಹಿಳೆಯರ ಪಾಲುಗಾರಿಕೆ ಹೆಚ್ಚುತ್ತಿದೆಯಾದರೂ ವಿವಾಹಿತ ಮಹಿಳೆಯರ ಪಾಲುಗಾರಿಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಮಕ್ಕ ಳಾದ ತರುವಾಯ ಉದ್ಯೋಗ ತ್ಯಜಿ ಸಲು ಮಹಿಳೆಯರ ಮೇಲೆ ಒತ್ತಡ ವಿರುತ್ತದೆ.
Advertisement
ಕ್ಲಾಡಿಯಾ ಗೋಲ್ಡಿನ್ ಅವರ ಸಂಶೋ ಧನೆ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಅತೃಪ್ತಿಕರ ಪಾಲುಗಾರಿಕೆ ಯನ್ನು ಎತ್ತಿ ತೋರಿಸಿದೆಯಾದರೂ ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಸೂಚಿಸಿಲ್ಲ. ಹಾಗಿದ್ದರೂ ಅವರ ಸಂಶೋಧನೆಯ ಫಲಿತಾಂಶಗಳು ಮುಂದಿನ ಸಂಶೋಧಕರಿಗೆ ಈ ವಿಷ ಯದಲ್ಲಿ ಮತ್ತಷ್ಟು ಅಧ್ಯಯನ ನಡೆ ಸಲು ಅವಕಾಶಗಳನ್ನೊದಗಿಸುತ್ತವೆ. ಅಷ್ಟೇ ಅಲ್ಲದೆ ಗೋಲ್ಡಿನ್ ಅವರ ಸಂಶೋಧನೆ ನೀತಿ ನಿರೂಪಕರಿಗೆ ಮತ್ತು ಸರಕಾರಗಳಿಗೆ ಮಹಿಳೆಯರ ಉದ್ಯೋಗವನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳಲು ಬೇಕಾದ ಧೋರಣಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ತಳಹದಿ ಯನ್ನೊದಗಿಸುತ್ತದೆ.
ಭಾರತದ ಸ್ಥಿತಿಭಾರತದಲ್ಲಿ ದುಡಿಮೆ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಇತರ ಕಡಿಮೆ ಆದಾ ಯದ ದೇಶಗಳಿಗಿಂತ ಕಡಿಮೆಯಿದೆ.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲ ಯದ 2023ರ ವರದಿಯೊಂದರ ಪ್ರಕಾರ ಭಾರತದಲ್ಲಿ ದುಡಿಮೆ ಮಾರು ಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ, ಪುರುಷರ ಪಾಲು ಗಾರಿಕೆಯ ಅರ್ಧ ದಷ್ಟು ಮಾತ್ರ ಇದೆ. ಪುರುಷರ ಪಾಲು ಗಾರಿಕೆ ಶೇ. 56.2 ಇದ್ದರೆ ಮಹಿಳೆಯರ ಪಾಲುಗಾರಿಕೆ ಶೇ. 27.8 ಮಾತ್ರ ಇದೆ.
ಭಾರತದ ಅಂಕಿಅಂಶಗಳನ್ನು ಗಮನಿ ಸಿದಾಗ, ದೇಶದಲ್ಲಿ ದುಡಿಮೆ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವ ಆವಶ್ಯಕತೆಯಿದೆ. ಸರಕಾರ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಇತರ ಉದ್ದಿಮೆಗಳು ಅಸಂ ಘಟಿತ ವಲಯದ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳು ಖಾಲಿ ಇರುವ ಸ್ಥಾನಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರನ್ನು ನೇಮಿಸಬೇಕು. ಈ ಮೂಲಕ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲುಗಾರಿಕೆಯನ್ನು ಹೆಚ್ಚಿಸಬಹುದು. ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪುರುಷರ ಮತ್ತು ಮಹಿಳೆಯರ ಪಾಲುಗಾರಿಕೆ ಕುರಿತಾದ ಅಂಕಿಅಂಶಗಳು ಈ ರೀತಿ ಇವೆ.
ಪ್ರದೇಶ ಪುರುಷರು ಮಹಿಳೆಯರು
ಗ್ರಾಮೀಣ 55.50 30.50
ನಗರಗಳು 58.30 20.20
ಅಖೀಲ ಭಾರತ 56.20 27.80 ಡಾ| ಕೆ. ಕೆ. ಅಮ್ಮಣ್ಣಾಯ