ಚನ್ನಗಿರಿ: ಪಕ್ಷತೀತವಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಬಡವರು-ಧೀನ ದಲಿತರ ಏಳ್ಗೆಗಾಗಿ ಶ್ರಮಿಸಲಾಗುವುದು ಎಂದು ತಾಪಂ ನೂತನ ಅಧ್ಯಕ್ಷೆ ಇ.ಆರ್. ಸುಜಾತಾ ಬಸವರಾಜ್ ಹೇಳಿದರು. ಪಟ್ಟಣದ ವಿಠuಲರುಕ್ಕುಮಾಯಿ ಕಲ್ಯಾಣ ಮಂದಿರದಲ್ಲಿ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಹಾಲುಮತ ಸಮಾಜವನ್ನು ಗುರುತಿಸಿ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ನನಗೆ ಹರ್ಷತಂದಿದೆ. ಪಕ್ಷದಲ್ಲಿ ವ್ಯಕ್ತಿಗಿಂತ ಕಾರ್ಯಕರ್ತರು ಶಕ್ತಿ ಇದ್ದಂತೆ. ಇಂದು ಅಧ್ಯಕ್ಷ ಸ್ಥಾನವನ್ನು ನೀಡಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ ಅವರ ನಂಬಿಕೆಯನ್ನು ಹುಸಿಗೊಳಿಸದೇ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಜಾತ್ಯತೀತವಾಗಿ ಆಡಳಿತವನ್ನು ನೀಡಲು ಪ್ರತಿಯೊಬ್ಬರು ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನಲ್ಲಿ ಕುಡಿಯೋ ನೀರು, ಶಿಕ್ಷಣ, ಶೌಚಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುವುದು. ರಾಜಕೀಯದಲ್ಲಿ ಯಾರೋಬ್ಬರಿಗೂ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಮನಗಂಡು, ಜನ ಪ್ರತಿನಿಧಿ ಗಳು ಕೆಲಸವನ್ನು ಮಾಡಬೇಕು.
ತಾಲೂಕು ಬಿಜೆಪಿ ಅಧ್ಯಕ್ಷ ಮೇದಿಕೆರೆ ಸಿದ್ದೇಶ್ ಮಾತನಾಡಿ, ತಾಪಂ, ಜಿಪಂನಲ್ಲಿ ಬಿಜೆಪಿ ಅ ಧಿಕಾರದ ಚುಕಾಣಿ ಹಿಡಿದಿದ್ದು, ಈ ಬಾರಿಯ 2018ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಿದ್ಧರಾಗಬೇಕು. ಈಗಾಗಲೇ ಜಿಪಂ ಮತ್ತು ತಾಪಂನಲ್ಲಿ ಪಕ್ಷದ ಚುನಾಯಿತರು ಉತ್ತಮ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಅದೇ ರೀತಿಯಲ್ಲಿ ನೂತನ ಅಧ್ಯಕ್ಷರು ಕೂಡ ಅಧಿ ಕಾರವನ್ನು ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ. ಕಾರ್ಯಕರ್ತರು ಪಕ್ಷದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ನೂತನವಾಗಿ ಆಯ್ಕೆಯಾದ ತಾಪಂ ಅಧ್ಯಕ್ಷರು ಸುಜಾತ ಬಸವರಾಜ್ ಅವರನ್ನು ಕಾರ್ಯರ್ತರು ತೆರದ ವಾಹನದಲ್ಲಿ ಮೆರವಣೆಗೆ ನಡೆಸಿದರು.
ಮಾಜಿ ಶಾಸಕ ಮಾಡಳ್ ವಿರೂಪಾಕ್ಷಪ್ಪ, ಸಂತೆಬೆನ್ನೂರು ಬಿಜೆಪಿ ಮುಖಂಡ ಬಸವರಾಜ್, ಜಿಪಂ ಸದಸ್ಯೆ ಯಶೋಧಮ್ಮ, ಸಾಕಮ್ಮ, ವಾಗೀಶ್, ತಾಪಂ ಉಪಾಧ್ಯಕ್ಷ ಹಾಲೇಶ್ ನಾಯ್ಕ, ಸದಸ್ಯರಾದ ಪುಷ್ಪಾವತಿ, ಗಾಯತ್ರಿ, ರೂಪಾ, ಕವಿತಾ, ಗೀತಾ, ಸೋಮಶೇಖರ್, ಬಿ.ಅಣಯ್ಯ, ಮರುಳಪ್ಪ, ಟಿ.ವಿ. ರಾಜು ಇತತರಿದ್ದರು.