Advertisement

ಪಾರ್ಟ್‌ಟೈಂ ಜಾಬ್‌ ಆಮಿಷ: 4.96 ಲ.ರೂ. ವಂಚನೆ

09:39 PM Apr 19, 2023 | Team Udayavani |

ಮಂಗಳೂರು: ಪಾರ್ಟ್‌ ಟೈಂ ಉದ್ಯೋಗವಿದೆ ಎಂದು ಹೇಳಿ 4.96 ಲ.ರೂ. ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ದೂರುದಾರ ವ್ಯಕ್ತಿಯ ಟೆಲಿಗ್ರಾಮ್‌ ಖಾತೆಗೆ ಆನ್‌ಲೈನ್‌ನಲ್ಲಿ ಪಾರ್ಟ್‌ ಟೈಂ ಜಾಬ್‌ ಇದೆ ಎಂದು ಹೇಳಿ ಅಪರಿಚಿತನೋರ್ವ ವೆಬ್‌ಸೈಟ್‌ ಲಿಂಕ್‌ ಕಳುಹಿಸಿದ್ದ. ಅನಂತರ 9233424937 ಮತ್ತು 9501710027 ಸಂಖ್ಯೆಯಿಂದ ಕರೆ ಮಾಡಿದ್ದ. ಬಳಿಕ ಆತನ ಖಾತೆಯಿಂದ ದೂರುದಾರ ವ್ಯಕ್ತಿಯ ಖಾತೆಗೆ 872 ರೂ, 12,000 ರೂ.ಗಳನ್ನು ಕಳುಹಿಸಿದ್ದ. ಅನಂತರ ಟಾಸ್ಕ್ ಪೂರ್ಣಗೊಳಿಸುವ ಸಂಬಂಧವಾಗಿ ದೂರುದಾರ ವ್ಯಕ್ತಿಯಿಂದ 1 ಲ.ರೂ., 1.80 ಲ.ರೂ, 1.04 ಲ.ರೂ, 40,576 ರೂ. ಸೇರಿದಂತೆ ಒಟ್ಟು 4.96 ಲ.ರೂ.ಗಳನ್ನು ಅಪರಿಚಿತ ಆತನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next