ಹಿಮಾಚಲ ಪ್ರದೇಶ: ಹಿಮಾಚಲದ ಕುಲು ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ-3 ರ ಮೇಲೆ ಕಲ್ಲು ಬಂಡೆಗಳು ಉರುಳಿ ಬಿದ್ದ ಪರಿಣಾಮ ಲೇಹ್ – ಮನಾಲಿ ಹೆದ್ದಾರಿ ಸ್ಥಗಿತಗೊಂಡಿದೆ ಅಲ್ಲದೆ ಸೇತುವೆಯ ಮೇಲೆ ಬಂಡೆ ಕಲ್ಲುಗಳ ರಾಶಿ ಬಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬುಧವಾರ ತಡರಾತ್ರಿ ಮೇಘ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಬುಧವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ ಮೂರರ ಧುಂಡಿ ಮತ್ತು ಪಲ್ಚನ್ ಸೇತುವೆಯ ನಡುವೆ ಕಲ್ಲುಗಲು ರಾಶಿ ಬಿದ್ದಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ರಾಜ್ಯಗಳ ನಡುವಿನ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದ್ದಾರೆ.
ಅಟಲ್ ಸುರಂಗದ ಮೂಲಕ ಲಾಹೌಲ್ ಮತ್ತು ಸ್ಪಿಟಿಯಿಂದ ಮನಾಲಿಗೆ ಹೋಗುವ ವಾಹನಗಳನ್ನು ರೋಹ್ಟಾಂಗ್ ಮಾರ್ಗವಾಗಿ ಸಂಚರಿಸುವಂತೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇಘಸ್ಫೋಟದಿಂದಾಗಿ ಮಂಡಿಯಲ್ಲಿ 12 ರಸ್ತೆ, ಕಿನ್ನೌರ್‌ನಲ್ಲಿ ಎರಡು ಮತ್ತು ಕಂಗ್ರಾ ಜಿಲ್ಲೆಯ ಒಂದು ಸೇರಿದಂತೆ ಒಟ್ಟು 15 ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಅಲ್ಲದೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ: Karkala ಪರಶುರಾಮ ಥೀಮ್ ಪಾರ್ಕ್ ಪ್ರಕರಣ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅಮಾನತು