Advertisement

ವಿಡಿಯೋ: ಕ್ರೈಂ ರಿಪೋರ್ಟ್ ಮಾಡುತ್ತಿದ್ದಾಗಲೇ ಪತ್ರಕರ್ತನ ಕಿವಿಯಿಂದ ಇಯರ್ ಫೋನ್ ಕದ್ದ ಗಿಳಿ

11:26 AM Nov 06, 2022 | Team Udayavani |

ಅಮೇರಿಕಾ : ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ನೇರಪ್ರಸಾರವಾಗುತ್ತಿದ್ದ ಸುದ್ದಿಯ ವರದಿ ಮಾಡುತ್ತಿದ್ದ ಪತ್ರಕರ್ತನ ಕಿವಿಯಿಂದ ಗಿಳಿಯೊಂದು ಇಯರ್ ಫೋನ್ ಕದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ವಿಡಿಯೋದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುತ್ತಿರುವ ಪತ್ರಕರ್ತನೋರ್ವ ಅಪರಾಧ ವರದಿಗೆ ಸಂಬಂಧಪಟ್ಟ ನೇರ ಪ್ರಸಾರದಲ್ಲಿ ಕ್ಯಾಮೆರಾ ಮುಂದೆ ನಿಂತು ಕಳ್ಳತನದ ಘಟನೆಯನ್ನು ವರದಿ ಮಾಡುತ್ತಿದ್ದಾಗ ಗಿಳಿ ಪತ್ರಕರ್ತನ ಭುಜದ ಮೇಲೆ ಬಂದು ಕುಳಿತಿದೆ ಆದರೂ ವರದಿಗಾರ ತನ್ನ ವರದಿಯನ್ನು ಮುಂದುವರೆಸಿದ್ದಾನೆ ಈ ವೇಳೆ ಗಿಳಿ ಪತ್ರಕರ್ತನ ಕಿವಿಯಲ್ಲಿದ್ದ ಇಯರ್ ಫೋನ್ ಬಾಯಿಯಿಂದ ಕಚ್ಚಿ ಹಾರಿ ಹೋಗಿದೆ, ಇದೆಲ್ಲವೂ ಕ್ಯಾಮರಾಮ್ಯಾನ್ ಸೆರೆ ಹಿಡಿದ ವಿಡಿಯೋದಲ್ಲಿ ಸೆರೆಯಾಗಿದೆ.

ಪತ್ರಕರ್ತನ ಹೆಸರು ನಿಕೋಲಸ್ ಕ್ರೂಮ್ ಎನ್ನಲಾಗಿದೆ, ಲೈವ್ ಶೋನಲ್ಲಿ ಮಾತನಾಡುತ್ತಿದ್ದಾಗ ಗಿಳಿ ಬಂದು ಇಯರ್ ಫೋನ್ ಕದ್ದು ಓದಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next