Advertisement

ಮೆಂತ್ಯೆ ಸೊಪ್ಪಿನ ಪರೋಟಾ

10:10 PM Dec 20, 2019 | mahesh |

ಅತ್ಯಧಿಕ ವಿಟಮಿನ್‌ ಹೊಂದಿರುವ ಮೆಂತ್ಯ ಸೊಪ್ಪು ಸೇವನೆಯಿಂದ ದೇಹಕ್ಕೆ ತಂಪು, ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ರಕ್ತದ ಒತ್ತಡ ನಿಯಂತ್ರಿಸಲು ಸಹಕಾರಿ, ಎದೆ ಹಾಲು ಉತ್ಪತ್ತಿಗೆ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್‌ ನಿವಾರಣೆಗೆ ಉಪಯುಕ್ತವಾಗಿದೆ.

Advertisement

ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು -ಅರ್ಧ ಕಪ್‌
ಮೆಂತ್ಯೆ ಸೊಪ್ಪು-ಒಂದು ಕಟ್ಟು
ಬೆಳ್ಳುಳ್ಳಿ-ಒಂದು (ಸಣ್ಣಗೆ ಹೆಚ್ಚಿ ರುವ)
ಶುಂಠಿ -ಒಂದು (ಸಣ್ಣಗೆ ಹೆಚ್ಚಿ ರುವ)
ಖಾರದ ಪುಡಿ-ಒಂದು ಚಮಚ
ಅರಶಿ ನ-ಒಂದು ಚಿಟಿಕೆ
ರುಚಿಗೆ ತಕ್ಕಷ್ಟು -ಉಪ್ಪು
ನೀರು ಮತ್ತು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಮೆಂತ್ಯೆ ಸೊಪ್ಪನ್ನು ಚೆನ್ನಾಗಿ ಹೆಚ್ಚಿ ಕೊಳ್ಳಿ, ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು , ಹೆಚ್ಚಿದ ಮೆಂತ್ಯೆ ಸೊಪ್ಪು, ಖಾರದ ಪುಡಿ, ಬೆಳ್ಳುಳ್ಳಿ, ಶುಂಠಿ, ಉಪ್ಪು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಒಂದು ಕಾವಲಿ ಬಿಸಿಗಿಟ್ಟು ಬಳಿಕ ಚಪಾತಿಯಂತೆ ಲಟ್ಟಿಸಿ ಕಾಯಿಸಿದರೆ ಬಿಸಿ ಬಿಸಿ ಮೆಂತ್ಯೆ ಸೊಪ್ಪಿನ ಪರೋಟಾ ಸವಿಯಲು ಸಿದ್ದ.

-  ವಿಜಿತಾ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next