Advertisement
ಇದಕ್ಕೆ ಪೂರಕ ಉದಾಹರಣೆಯೇ ಮಧ್ಯಪ್ರದೇಶದ ದಾಮೋಹ್ ನಲ್ಲಿ ಗಿಳಿ ಕಾಣೆಯಾಗಿರುವುದು. ಮನೆ ಮಾಲೀಕ ಮುದ್ದಾದ ಗಿಳಿಯೊಂದನ್ನು ಸಾಕಿದ್ದು ಇದೀಗ ಅದು ಕಾಣೆಯಾಗಿದೆ ಹಾಗಂತ ಮನೆ ಮಾಲೀಕ ವಿಚಾರ ಅಲ್ಲಿಗೆ ಬಿಡಲಿಲ್ಲ ಅದನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಅಲ್ಲದೆ ಹುಡುಕಿ ಕೊಟ್ಟವರಿಗೆ ೧೦ ಸಾವಿರ ನಗದು ಬಹುಮಾನ ನೀಡುವುದಾಗಿ ಹೇಳಿ ನಗರ ತುಂಬಾ ಪೋಸ್ಟರ್ ಅಂಟಿಸಿದ್ದಾರೆ.
Related Articles
ಮನೆಯ ಯಜಮಾನ ವಾಕಿಂಗ್ ಹೋಗುವಾಗ ಪಂಜರದಲ್ಲಿದ್ದ ಗಿಳಿಯನ್ನು ಹೊರತೆಗೆದು ತನ್ನ ಹೆಗಲ ಮೇಲೆ ಕೂರಿಸಿ ರಸ್ತೆಯಲ್ಲಿ ವಾಕಿಂಗ್ ಮಾಡುವ ವೇಳೆ ಬೀದಿ ನಾಯಿಗಳು ಗಿಳಿಯನ್ನು ನೋಡಿ ಬೊಗಳಲು ಆರಂಭಿಸಿದೆ ಹೀಗೆ ಹೆದರಿ ಮರದ ಮೇಲೆ ಕೂತ ಗಿಳಿ ಸಂಜೆಯಾದರೂ ಮನೆಗೆ ಬರಲೇ ಇಲ್ಲ ಬಳಿಕ ಮನೆಯ ಯಜಮಾನ ಹೊರಗೆ ಹೋಗಿ ಹುಡುಕಿದಾಗ ಗಿಳಿ ಎಲ್ಲೂ ಕಾಣಲಿಲ್ಲ ಇದರಿಂದ ಮನನೊಂದ ಮನೆ ಮಾಲೀಕ ಹಾಗೂ ಮನೆಯ ಸದಸ್ಯರು ಗಿಳಿಗಾಗಿ ಊರೆಲ್ಲಾ ಹುಡುಕಿದರು ಆದರೆ ಗಿಳಿ ಮಾತ್ರ ಪತ್ತೆಯಾಗಲಿಲ್ಲ.
Advertisement
ಗಿಳಿಯ ಕೊರಗಿನಲ್ಲಿ ಊಟ ಬಿಟ್ಟ ಮನೆ ಮಂದಿ ಬಳಿಕ ಕಾಣೆಯಾಗಿರುವ ಗಿಳಿಯ ಫೋಟೋ ಒಂದನ್ನು ಪೋಸ್ಟರ್ ಮಾಡಿ ನಗರದ ಎಲ್ಲಾ ಕಡೆ ಅಂಟಿಸಿ ಗಿಳಿ ಹುಡುಕಿ ಕೊಡುವಂತೆ ಆಗ್ರಹಿಸಿದ್ದಾರೆ ಜೊತೆಗೆ ಗಿಳಿಯನ್ನು ಹುಡುಕಿ ಕೊಟ್ಟವರಿಗೆ ೧೦ ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ವಾಹನದಲ್ಲಿ ಮೈಕ್ ಕಟ್ಟಿ ಗಿಳಿ ಕಾಣೆಯಾಗಿರುವ ಬಗ್ಗೆ ನಗರ ತುಂಬಾ ಪ್ರಚಾರ ಮಾಡಿ ಹುಡುಕುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಬಿರುಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ