Advertisement

ಸಂಸತ್‌ಗೆ ಅನುಭವ ಮಂಟಪ : ಬಜೆಟ್‌ ಅಧಿವೇಶನ ವೇಳೆ ಅನಾವರಣ

10:03 AM Dec 17, 2019 | sudhir |

ಕಲಬುರಗಿ: ವಿಶ್ವದಲ್ಲಿಯೇ ಮೊದಲ ಬಾರಿ, ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಾದಿ ಶರಣರ ಅನುಭವ ಮಂಟಪದ ಕಲಾಕೃತಿ ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ಇಲ್ಲವೆ ಅದಕ್ಕೂ ಮುನ್ನ ಅಳವಡಿಕೆಯಾಗಲಿದೆ. ಈ ಕಲಾಕೃತಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಆಗಲಿದೆ.

Advertisement

ಲೋಕಸಭಾಧ್ಯಕ್ಷ ಓಂ ಬಿರ್ಲಾ ಸಂಸತ್‌ ಆವರಣದೊಳಗೆ ಅನುಭವ ಮಂಟಪ ಕಲಾಕೃತಿ ಅಳವಡಿಕೆಗೆ ಅನುಮತಿ ನೀಡಿದ್ದು, ಸದ್ಯದಲ್ಲೇ ಅಳವಡಿಕೆಗೆ ದಿನಾಂಕ ಗೊತ್ತುಪಡಿಸುವುದಾಗಿ ತಿಳಿಸಿದ್ದಾರೆ. ನಾಡೋಜ ಪುರಸ್ಕೃತ, ರೂಪಧರ್‌ ಪ್ರಶಸ್ತಿ ವಿಜೇತ ಕಲಬುರಗಿಯ ಡಾ| ಜೆ.ಎಸ್‌. ಖಂಡೇರಾವ್‌ 2 ವರ್ಷಗಳಿಂದ ಈ ಕಲಾಕೃತಿ ರಚಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮ ಪ್ರಭು ಅಧ್ಯಕ್ಷತೆಯಲ್ಲಿ ನಡೆದ ಬಸವಾದಿ ಶರಣರ ಅಧಿವೇಶನ ಅಂದರೆ ಅನುಭವ ಮಂಟಪ ದೃಶ್ಯ ಕಣ್ಣೆದುರಿಗೆ ಬರುವ ರೀತಿಯಲ್ಲಿ ಕಲಾಕೃತಿ ರೂಪುಗೊಂಡಿದೆ. ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕ ಜೀವಿ ಶರಣರ ಪ್ರತಿನಿಧಿಗಳಾದ 770 ಅಮರಗಣಂಗಳು ಅನುಭವ ಮಂಟಪದಲ್ಲಿ ಸೇರಿ ಜೀವನ ದರ್ಶನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುತ್ತಿದ್ದ, ಶರಣ- ಶರಣೆಯರೆಲ್ಲರೂ ಪಾಲ್ಗೊಂಡ ಅಪರೂಪದ ದೃಶ್ಯವನ್ನು ಖಂಡೇರಾವ್‌ ಕಲಾಕುಂಚದಲ್ಲಿ ಸೆರೆ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next