Advertisement

ಸಂಸತ್ತು ಶರಣರ ಪರಿಕಲ್ಪನೆ

10:44 AM Mar 12, 2019 | Team Udayavani |

ಬಳ್ಳಾರಿ: ಭಾರತ ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿಶ್ವದಲ್ಲಿಯೇ ಸಂಸತ್ತಿನ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದವರು
ಬಸವಾದಿ ಶರಣರು ಎಂದು ಲೋಹಿಯಾ ಪ್ರಕಾಶನದ ಸಂಸ್ಥಾಪಕ ಸಿ.ಚನ್ನಬಸವಣ್ಣ ಹೇಳಿದರು.

Advertisement

ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌, ಮೈಸೂರು, ಬಳ್ಳಾರಿ ಘಟಕಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ “ವರ್ತಮಾನಕ್ಕೂ ವಚನ’ ಎಂಬ ಚಿಂತನಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಜಾತ್ಯತೀತತೆ, ಸಮಾನತೆ, ಭಾÅತೃತ್ವ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಂಶಗಳನ್ನು ಸಮಾನವಾಗಿ ಹಂಚಿಕೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಭವವೆಂಬ ಸಂಸತ್‌ ಮೂಲಕ ನೀಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು.

ಎರಡನೇ ಪ್ರಪಂಚ ಯುದ್ಧದಲ್ಲಿ ಸುಮಾರು ಐದು ಕೋಟಿ ಜನರು ಸಾವಿಗೀಡಾದ ಬಳಿಕ ಮಾನವ ಹಕ್ಕುಗಳ ಕುರಿತು  ಪ್ರಸ್ತಾಪವಾಯಿತು. ಆದರೆ, ಅದಕ್ಕೂ ಮುನ್ನವೇ ಶರಣರು ಮಾನವ ಹಕ್ಕುಗಳ ಕುರಿತು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.

ಸ್ವಾತಂತ್ರÂ ಬಂದ ನಂತರ ಇದುವರೆಗೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ದೊರೆಯುತ್ತಿಲ್ಲ. ಇಂತಹ ವೈಜ್ಞಾನಿಕ ಕಾಲಘಟ್ಟದಲ್ಲಿಯೂ ಇನ್ನು ಲಿಂಗ ಅಸಮಾನತೆ ಎದ್ದು ಕಾಣುತ್ತಿದೆ. ಹೀಗಿರುವಾಗ 12ನೇ ಶತಮಾನದಲ್ಲಿಯೇ ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಶರಣರ ಗುರಿಯಾಗಿತ್ತು ಎಂದು ಹೇಳಿದರು.

Advertisement

ಸಿರುಗುಪ್ಪದ ನಿವೃತ್ತ ಉಪನ್ಯಾಸಕ ಶಿವಕುಮಾರ್‌ ಬಳಿಗಾರ್‌, ವಚನಕ್ರಾಂತಿಯ ಪ್ರತಿಭಟನೆಯ ನೆಲೆಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ದೇವರು, ಧರ್ಮ, ಭಕ್ತಿ, ಕರ್ಮ ಮುಂತಾದ ಸಾಮಾಜಿಕ ನೆಲೆಯಲ್ಲಿ ಜಿಡ್ಡುಗಟ್ಟಿದ್ದ ಸಂಪ್ರದಾಯ ಆಚರಣೆಗಳನ್ನು ಪ್ರತಿಭಟನೆ ಮಾಡಿದ ಶರಣರು ಸಮಾನತೆಗಾಗಿ ಚಳವಳಿ ನಡೆಸಿದ್ದರು ಎಂದು ತಿಳಿಸಿದರು.

ಸಂಡೂರು ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ ವಚನಕ್ರಾಂತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ, ವಚನಗಳ ವಿಶ್ಲೇಷಣೆ ಮತ್ತು ವಚನ ಗಾಯನ ಗೋಷ್ಠಿಯಲ್ಲಿ ಮೆರೆಮಿಂಡದೇವ, ಮನುಮುನಿ ಗುಮ್ಮಟ, ಬಿಬ್ಬಿ ಬಾಚಯ್ಯ ಮತ್ತು ಚೆನ್ನಿಮರಸರ ನಾಲ್ಕು ವಚನಗಳ ವಿಶ್ಲೇಷಣೆ ಮಾಡಿದರು. ಸಂಗೀತ ಶಿಕ್ಷಕ ದೊಡ್ಡ
ಬಸವಗವಾಯಿ ವಚನ ಗಾಯನ ಮಾಡಿದರು. ಸುಧಾಕರ ತಬಲಾ ಸಾಥ್‌ ನೀಡಿದರು.ಕಾಲೇಜಿನ ಪ್ರಾಚಾರ್ಯ ಪ್ರೊ| ಯು.ಅಬ್ದುಲ್‌ ಮುತಾಲಿಬ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಡಾ| ಕೆ.ಬಸಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next