Advertisement

Parliament;ದೇಶಕ್ಕೆ ಕಳಂಕ ತರಲು ಹೊಗೆ ಬಾಂಬ್‌ ಕೃತ್ಯ: ಆರೋಪಪಟ್ಟಿ

01:48 AM Sep 09, 2024 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್‌ 13ರಂದು ಸಂಸತ್‌ನಲ್ಲಿ ನಡೆದ ಹೊಗೆ ಬಾಂಬ್‌ ದಾಳಿ ಪ್ರಕರಣದ ಆರೋಪಿಗಳು ಭಾರತದ ಪ್ರಜಾಸತ್ತೆಗೆ ಕಳಂಕ ತರುವ ಉದ್ದೇಶ ಹೊಂದಿದ್ದರು. ತ್ವರಿತವಾಗಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು, ಅಧಿಕಾರ, ಶ್ರೀಮಂತಿಕೆ ಹೊಂದಬೇಕು ಎಂಬ ಉದ್ದೇಶವೂ ಅವರದ್ದಾಗಿತ್ತು!
ಹೀಗೆಂದು ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ 1,000 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಕಳೆದ ಜೂನ್‌ನಲ್ಲೇ ಪಟಿಯಾಲಾ ಹೌಸ್‌ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು, ಜುಲೈನಲ್ಲಿ ಪೂರಕ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ಆದರೆ ಚಾರ್ಜ್‌ಶೀಟ್‌ನಲ್ಲಿರುವ ಅಂಶಗಳು ಈಗ ಬಹಿರಂಗಗೊಂಡಿದೆ. ಆರೋಪಿಗಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿ, ದಾಳಿಗೆ ಸುಮಾರು 2 ವರ್ಷಗಳು ಸಂಚು ರೂಪಿಸಿದ್ದರು. 2022ರ ಫೆಬ್ರವರಿ ಯಲ್ಲಿ ಮೈಸೂರಿನಲ್ಲಿ ಮೊದಲ ಭೇಟಿ ನಡೆದಿತ್ತು. ಪ್ರಮುಖ ಆರೋಪಿ ಮೈಸೂರಿನ ಮನೋರಂಜನ್‌ ತೀವ್ರಗಾಮಿತ್ವದ ಮಾವೋವಾದಿ ಚಿಂತನೆ ಹೊಂದಿದ್ದ. ಈತನೇ ಪ್ರಮುಖ ಸಂಚುಕೋರ ನಾಗಿದ್ದು, ಇತರರಿಗೆ ದಾಳಿ ನಡೆಸಲು ಪ್ರಚೋದನೆ ಕೊಟ್ಟಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next