Advertisement

ಜು.20ರಿಂದ ಆ.11ರವರೆಗೆ ಸಂಸತ್‌ ಅಧಿವೇಶನ

09:11 PM Jul 01, 2023 | Team Udayavani |

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜು.20ರಿಂದ ಆ.11ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ. ಎಲ್ಲ ಪಕ್ಷಗಳು ಒಂದಾಗಿ ಸಂಸತ್‌ ಅಧಿವೇಶನವನ್ನು ರಚನಾತ್ಮಕವಾಗಿ ನಡೆಸಲು ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.

Advertisement

ಈ ಅಧಿವೇಶನ ಹಲವು ಕಾರಣಗಳಿಂದ ಮಹತ್ವ ಪಡೆದಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂದು ಬಿಜೆಪಿ ಸಭೆಯೊಂದರಲ್ಲಿ ಹೇಳಿದ್ದಾರೆ. ಇದೇ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡನೆಯಾದರೂ ಆಗಬಹುದು. ಈಗಾಗಲೇ 17 ಪ್ರತಿಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎಲ್ಲ ರೀತಿಯಿಂದ ಹಣಿಯಲು ಸಿದ್ಧತೆ ಮಾಡಿಕೊಂಡಿವೆ. ಹಾಗಾಗಿ ಸಮಾನ ನಾಗರಿಕ ಸಂಹಿತೆ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಬಹುದು. ಜತೆಗೆ, ಮಣಿಪುರ ಹಿಂಸಾಚಾರ, ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ(ತಿದ್ದುಪಡಿ) ಸುಗ್ರೀವಾಜ್ಞೆ ಕೂಡ ಭಾರೀ ಚರ್ಚೆಗೆ ಗ್ರಾಸವಾಗಬಹುದು.

ಇನ್ನೊಂದು ಮುಖ್ಯ ಸಂಗತಿಯೆಂದರೆ, ಸಂಸತ್‌ ಅಧಿವೇಶನ ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗೆ ಈ ಬಾರಿ ಉತ್ತರ ಸಿಗುತ್ತದೆ. ಮೇ 28ರಂದು ಮೋದಿ ನೂತನ ಸಂಸತ್‌ ಭವನ ಉದ್ಘಾಟಿಸಿದ್ದಾರೆ. ಈಗಿನ ಅಂದಾಜಿನ ಪ್ರಕಾರ ಆರಂಭದಲ್ಲಿ ಅಧಿವೇಶನ ಹಳೆಯ ಭವನದಲ್ಲೇ ನಡೆಯಲಿದೆ. ನಂತರ ಹೊಸ ಭವನಕ್ಕೆ ಸ್ಥಳಾಂತರಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.